ಎಡದಂಡೆ ನಾಲೆಗೆ ನೀರು ಬಿಡುಗಡೆ

ಕೊಪ್ಪಳ ತಾಲೂಕಿನ ಬಸಾಪುರ ಬಳಿ ತುಂಗಭದ್ರಾ ಎಡದಂಡೆ ನಾಲೆ ರಿಪೇರಿ ಮುಗಿದಿದ್ದು ಕಾಲುವೆಗೆ ನೀರು ಹರಿಸಲಾಯಿತು.
ಕೊಪ್ಪಳ ತಾಲೂಕಿನ ಬಸಾಪುರ ಬಳಿ ತುಂಗಭದ್ರಾ ಎಡದಂಡೆ ನಾಲೆ ರಿಪೇರಿ ಮುಗಿದಿದ್ದು ಕಾಲುವೆಗೆ ನೀರು ಹರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಹುದಿನಗಳ ಬೇಡಿಕೆ ಈಡೇರಿಕೆ
  • ಕೊಪ್ಪಳ-ರಾಯಚೂರು ಭಾಗಕ್ಕೆ ಅನುಕೂಲ
ಕೊಪ್ಪಳ: ತಾಲೂಕಿನ ಬಸಾಪುರ ಬಳಿ ಕೊಚ್ಚಿ ಹೋಗಿದ್ದ ಎಡದಂಡೆ ನಾಲೆ ಕಾಮಗಾರಿ ಮುಕ್ತಾಯವಾಗಿದ್ದು ಕಾಲುವೆಗೆ ನೀರು ಬಿಡುಗಡೆ ಮಾಡಲಾಯಿತು.
ಕುಡಿವ ನೀರಿಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ&ಸ್ಥಳಿಯ ಸಂಸ್ಥೆಗಳು ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆ ತುಂಬಿಸಲಾಗುವುದು. ಮೈಲ್​ 0 ರಿಂದ 104 ಮೈಲ್​ವರೆಗೆ ಮಾ.31ರಿಂದ ಏ.15ವರೆಗೆ 1500 ಕ್ಯೂಸೆಕ್​ನಂತೆ ಹರಿಸಲಾಗುವುದು. ಯರಮರಸ್​ ವಿಭಾಗಕ್ಕೆ ಏ.2 ರಿಂದ ಏ.6ವರೆಗೆ, ಸಿರವಾರ ವಿಭಾಗಕ್ಕೆ ಏ.7 ರಿಂದ ಏ.9ವರೆಗೆ, ಸಿಂಧನೂರು ವಿಭಾಗಕ್ಕೆ ಏ.10 ರಿಂದ ಏ. 12ವರೆಗೆ ಹಾಗೂ ವಡ್ಡರಹಟ್ಟಿ ವಿಭಾಗಕ್ಕೆ ಏ.13 ರಿಂದ ಏ.15ವರೆಗೆ ನೀರು ಹರಿಸಲಾಗುವುದು.
ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಮೂಲಕ ಕುಡಿವ ನೀರು ಶೇಖರಣೆ ಮಾಡಿಕೊಳ್ಳಬೇಕು. 104 ಮೈಲ್​ವರೆಗೆ ನೀರು ಹರಿಸಿ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆ ತುಂಬಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್​ ಸಿಬ್ಬಂದಿಯೊಡಗೂಡಿ ಸಪರ್ಕವಾಗಿ ನಿರ್ವಹಣೆ ಮಾಡುವಂತೆ ಮುನಿರಾಬಾದ್​ ಸಿಇ ಎಸ್​.ಬಿ.ಮಲ್ಲಿಗೆವಾಡ ಸೂಚಿಸಿದ್ದಾರೆ.
ರೈತರಲ್ಲಿ ಮನವಿ : ಕುಡಿವ ಉದ್ದೇಶದಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡಬಾರದು. ಕಾಲುವೆಯಿಂದ ರೈತರು ನೀರೆತ್ತುವುದನ್ನು ನಿಷೇಧಿಸಿದೆ. ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಸಿಇ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net