ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಅಗತ್ಯ

ಅಳವಂಡಿ ಗ್ರಾಪಂನಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲನಾ ಸಭೆಯಲ್ಲಿ ಸಿಡಿಪಿಒ ರೋಹಿಣಿ ಮಾತನಾಡಿದರು. ವಿಎ ಅರುಂಧತಿ, ಬಿಎಲ್‌ಒಗಳಾದ ಕೃಷ್ಣ, ದಾದಾ ಕಲಂದರ್, ಮಮ್ತಾಜ್ ಬೇಗಂ, ಗೀತಾ, ಮಂಜುನಾಥ, ನಾಗರಾಜ, ಕೊಟ್ರೇಶ ಹಾಗೂ ಬಿಎಲ್‌ಎಗಳಾದ ಪ್ರಧಾನಪ್ಪ, ದ್ಯಾಮಣ್ಣ, ಮೆಹಬೂಬ್ ಹುಸೇನ್ ಮುಲ್ಲಾ, ನೀಲಪ್ಪ ಹಕ್ಕಂಡಿ ಇತರರು ಇದ್ದರು.

Published on
ಅಳವಂಡಿ: ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲನಾ ಸಭೆ ಬುಧವಾರ ನಡೆಯಿತು.
ಸಿಡಿಪಿಒ, ನೋಡೆಲ್ ಅಧಿಕಾರಿ ರೋಹಿಣಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣ ಕಾರ್ಯವನ್ನು ಶೇ.100 ಸಮಗ್ರವಾಗಿ ಕೈಗೊಳ್ಳಲಾಗಿದೆ.
ಬಿಎಲ್‌ಒ ಹಾಗೂ ಬಿಎಲ್‌ಎಗಳು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿ ಸಂಪೂರ್ಣ ಪರಿಶೀಲಿಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸ್ಥಳಾಂತರಗೊಂಡವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರ ನಿಖರ ಮಾಹಿತಿ ಪಡೆದು ಪರಿಶೀಲಿಸಬೇಕು. ಗ್ರಾಮದಿಂದ ಗುಳೆ ಹೋಗಿರುವವರ ವಿವರ ಸಹ ಖಚಿತಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು, ವಿಳಾಸ ಸೇರಿ ಯಾವುದೇ ದೋಷಗಳು ಕಂಡುಬಂದಲ್ಲಿ ಅವುಗಳನ್ನು ಗುರುತಿಸಿ ನಿಯಮಾನುಸಾರ ಸರಿಪಡಿಸುವಂತೆ ತಿಳಿಸಿದರು. ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net