ಮೃತನ ಮನೆಗೆ ತಂಗಡಗಿ ಭೇಟಿ-ಸಾಂತ್ವನ

ಮೃತ ಬಸವರಾಜರೆಡ್ಡಿ ಮನೆಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗಂಗಾಧರಸ್ವಾಮಿ, ವೀರೇಶ ಸಮಗಂಡಿ ಇತರರಿದ್ದರು.
ಮೃತ ಬಸವರಾಜರೆಡ್ಡಿ ಮನೆಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗಂಗಾಧರಸ್ವಾಮಿ, ವೀರೇಶ ಸಮಗಂಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂತ್ರಸ್ತ
  • ಕುಟುಂಬಕ್ಕೆ
  • ಪರಿಹಾರದ

ಕನಕಗಿರಿ:

ಜಾಗದ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜರೆಡ್ಡಿ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಸಚಿವ ಶಿವರಾಜ ತಂಗಡಗಿ, ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಧ್ವಜಾರೋಹಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿದ್ದ ಕಾರಣ ಘಟನೆ ಮಾಹಿತಿ ಇರಲಿಲ್ಲ. ಪತ್ರಕರ್ತರಿಂದ ವಿಷಯ ತಿಳಿದ ತಕ್ಷಣವೇ ಐಜಿ-ಎಸ್‌ಪಿ ಅವರೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಸೂಚಿಸಿದ್ದೇನೆ. ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಸಂಪೂರ್ಣ ತನಿಖೆ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.
ಸಾವಿನಲ್ಲಿ ಎಂದೂ ರಾಜಕೀಯ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಕೈಗೊಳ್ಳಲಾಗುವುದು ಹಾಗೂ ಸಿಎಂ ಜತೆ ಚರ್ಚಿಸಿ ಕುಟುಂಬಕ್ಕೆ ಪರಿಹಾರ ಕೊಡಿಸಲಾಗುವುದು. ಈಗಾಗಲೇ ಕರ್ತವ್ಯಲೋಪದಡಿ ಪೊಲೀಸರ ಅಮಾನತಾಗಿದೆ. ಠಾಣೆ ಹಾಗೂ ಪಪಂನಲ್ಲಿ ಹಲವು ವರ್ಷಗಳಿಂದ ಇರುವ ಸಿಬ್ಬಂದಿಯನ್ನು ವರ್ಗಾಯಿಸಲಾಗುವುದು. ಕ್ಷೇತ್ರದಲ್ಲಿ ಶಾಂತಿ ಕದಡಲು ಬಿಡುವುದಿಲ್ಲ ಎಂದರು.
ಈ ವೇಳೆ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡ, ಪ.ಪಂ. ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ರಾಜಸಾಬ ನಂದಾಪುರ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿ.ಪಂ. ಮಾಜಿ ಸದಸ್ಯ ವೀರೇಶ ಸಮಗಂಡಿ ಸೇರಿದಂತೆ ಹಲವರಿದ್ದರು.
ಮೃತನ ಪತ್ನಿ ಆಕ್ರೋಶ
ಸಚಿವರ ಭೇಟಿ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮೃತನ ಪತ್ನಿ ರಾಧಿಕಾ, ಪೊಲೀಸರು ಹಾಗೂ ಪಪಂ ಸಿಬ್ಬಂದಿ ಸ್ಪಂದಿಸಿದ್ದರೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ನಮ್ಮ ಕುಟುಂಬಕ್ಕೆ 2.5 ಕೋಟಿ ರೂ. ಪರಿಹಾರ, ಸರ್ಕಾರಿ ನೌಕರಿ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು.
"

ಅಧಿವೇಶನಕ್ಕೆಂದು ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಬಸವರಾಜರೆಡ್ಡಿ ಆತ್ಮಹತ್ಯೆ ಬಗ್ಗೆ ಮಾಹಿತಿ ದೊರೆಯಿತು. ಪ್ರಕರಣ ದಾಖಲಿಸಬೇಡಿ ಎಂದು ಯಾರಿಗೂ ಹೇಳಿಲ್ಲ. ಇಂಥಹದ್ದನ್ನೆಲ್ಲ ಬಳಸಿಕೊಳ್ಳಲು ಆತುರ ತೋರಿರುವ ದಢೇಸುಗೂರು, ಬಸವರಾಜರೆಡ್ಡಿ ಸಾವಿನ ಪ್ರಕರಣದ ತಳ ಬುಡ ಏನೂ ಗೊತ್ತಿಲ್ಲ. ಸುಮ್ಮನೇ ಕ್ಷೇತ್ರದಲ್ಲಿ ಅಡ್ಡಾಡುತ್ತಾರೆ. ಅವರ ಬಗ್ಗೆಯೇ ಮಾತನಾಡುವುದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವ ಜಾಯಮಾನವೂ ನನ್ನದಲ್ಲ. ದಢೇಸುಗೂರು ಮತ್ತು ಬಿಜೆಪಿಯವರ ಆರೋಪಗಳಿಗೆ ಬೆಲೆ ಇಲ್ಲ

— ಶಿವರಾಜ ತಂಗಡಗಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net