ಅಶೋಕ-ಸವದಿ ಜತೆ ದೇಗುಲಕ್ಕೆ ಭೇಟಿ

ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ
ಕೊಪ್ಪಳ: ಹಿಂದೆ ನಾನು ವಿಪಕ್ಷ ನಾಯಕ ಆರ್​.ಅಶೋಕ್​, ಸಚಿವ ಲಕ್ಷ$್ಮಣ ಸವದಿ ವೈಷ್ಣವಿ ದೇವಿ ದೇಗುಲಕ್ಕೆ ಹೋಗಿದ್ದೆವು. ಅವತ್ತೇ ದೆಹಲಿಯಿಂದ ಅಶೋಕ್​ ಅವರಿಗೆ ವಿಪಕ್ಷ ನಾಯಕ ಆಗುವ ಬಗ್ಗೆ ಸುದ್ದಿ ಬಂದಿತ್ತು. ನಾನು ಪಕ್ಕದಲ್ಲೇ ಇದ್ದೆ. ಅಂದೇ ಶುಭಾಶಯ ತಿಳಿಸಿರುವೆ ಎಂದು ರಾಯರಡ್ಡಿ ವೈಷ್ಣವಿ ದೇವಿ ೋಟೋ ತೋರಿಸಿದರು.
ಬುಧವಾರ ಯಲಬುರ್ಗಾ, ಕುಕನೂರಿನಲ್ಲಿ ಪ್ರವಾಸ ಕೈಗೊಂಡು ಮಾತನಾಡಿದರು.
ಆರ್​.ಅಶೋಕ್​, ಸುನಿಲ್​ಕುಮಾರ್​, ಹಾಲಪ್ಪ ಆಚಾರ್​ ಯಾರೂ ನನ್ನನ್ನು ಬೈಯ್ಯುವುದಿಲ್ಲ. ಯಾಕೆಂದರೆ ಶಕ್ತೀಪಿಠದಲ್ಲಿ ನಾನು ಅಶೋಕ್​ಗೆ ಗುಡ್​ ನ್ಯೂಸ್​ ನೀಡಿರುವೆ. ನಾನು ಎಲ್ಲ ಧರ್ಮಗಳ ಪವಿತ್ರ ಸ್ಥಳಗಳಿಗೆ ಹೋಗಿ ಬಂದಿರುವೆ. ನಾನು ಮುಸ್ಲಿಂ ಧಾರ್ಮಿಕ ವಿವಾಹ ಕಾರ್ಯಕ್ರಮದಲ್ಲಿ ಹೇಳಿದ್ದು ಇಸ್ಲಾಂ ಧರ್ಮ ಶ್ರೇಷ್ಠವೆಂದು. ಉಪನಿಷತ್ತು, ವೇದ ಅಧ್ಯಯನ ಮಾಡಿರುವೆ. ಮುಸ್ಲಿಂ ಸಮುದಾಯ ಸಭೆಯಲ್ಲಿ ಕುರಾನ್​ನಲ್ಲಿ ಇರುವುದನ್ನು ಹೇಳುವುದು ಬಿಟ್ಟು ಅವರನ್ನು ಬೈಯ್ಯಲು ಆಗುತ್ತದಾ ? ಮತಾಂತರ ಆಗದ ಹೊರತು ಹಜ್​ಗೆ ಹೋಗಲು ಆಗದು, ನಾನು ಶರಣ ತತ್ವದವನು, ಮತಾಂತರ ಆಗುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಎಂದಿರುವೆ ಎಂದು ಹಿಂದಿನ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.
ಎರಡು ದಿನ ನನ್ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದರು. ಬಿಹಾರದ ಸಂಸದ ದ್ಯಾನಿಶ್​ ಅಲಿ ಸಹ ೋನ್​ ಮಾಡಿ ವಿಚಾರಿಸಿದರು. ಸಿಎಂ ಡಿಕೆಶಿ ಕೂಡಾ ಕೇಳಿದರು. ಜನಗಳೇ ನಿಜ ದೇವರು. ನನಗೆ ಪ್ರಚಾರ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಾಧ್ಯಮಗಳಿಗೆ ಟಾಂಗ್​ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net