ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ

ವಿರೇಶ ಪತ್ತಾರ
ವಿರೇಶ ಪತ್ತಾರ
Published on

ಪ್ರಮುಖ ಮುಖ್ಯಾಂಶಗಳು

  • ವಿರೇಶ ಪತ್ತಾರ
ಕೊಪ್ಪಳ : ಪ್ರಸ್ತುತ ಸಾಲಿನ ಎಸ್​.ಎಸ್​.ಎಲ್​.ಸಿ ಮತ್ತು ದ್ವಿತಿಯ ವರ್ಷ ಪಿ.ಯು.ಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕದೊಂದಿಗೆ ಉತ್ತೀರ್ಣರಾದ ವಿಶ್ವಕರ್ಮ ಸಮುದಾಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮೇ 31ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಟೌನಹಾಲ್​ನಲ್ಲಿ ಪ್ರತಿಭಾ ಪುರಸ್ಕಾರ- ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ವಿರೇಶ ಪತ್ತಾರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಸಾರಥ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರದಲ್ಲಿ
ಭಾಗವಹಿಸುವ ಮಕ್ಕಳು ತಮ್ಮ ಮಾರ್ಕ್ಸ್​ ಕಾರ್ಡ್​ ಜತೆಗ ಟಿ.ಸಿ. ಅಥವಾ ಜಾತಿ ಪ್ರಮಾಣ ಪತ್ರದ ದಾಖಲೆಯೊಂದಿಗೆ ತಮ್ಮ ವಾಟ್ಸ್​ ಆಪ್​ ಗ್ರೂಪ್​ಗಳಿಗೆ ಬಂದ ಅರ್ಜಿ ಪಡೆದು ಭರ್ತಿ ಮಾಡಬೇಕು. ಅದರ ನಕಲು ಪ್ರತಿ ವಾಟ್ಸಾಪ್​ ಮಾಡಬೇಕು. ಮಾಹಿತಿಗಾಗಿ ಸಮುದಾಯ ತಾಲೂಕು ಅಧ್ಯಕ್ಷರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ವಿಶ್ವಕರ್ಮ ಮಹಾಸಭಾದ ಗಂಗಾವತಿ ತಾಲೂಕು ಅಧ್ಯಕ್ಷ ದೇವೇಂದ್ರ ಬಡಿಗೇರ, ಕಾರಟಗಿ ಅಧ್ಯಕ್ಷ ಅಂಜಿನೆಯ ವಿಶ್ವಕರ್ಮ, ಕುಷ್ಟಗಿ ಅಧ್ಯಕ್ಷ ವಿರೇಶ ಕಮ್ಮಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net