ಅವೈಜ್ಞಾನಿಕ ವಿಎಒ ವೃತ್ತಗಳಿಂದ ಸಮಸ್ಯೆ

ಕನಕಗಿರಿ ತಾಲೂಕಿನಲ್ಲಿ ಈ ಹಿಂದೆ ರಚಿಸಲಾದ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳ ನಕ್ಷೆ.
ಕನಕಗಿರಿ ತಾಲೂಕಿನಲ್ಲಿ ಈ ಹಿಂದೆ ರಚಿಸಲಾದ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳ ನಕ್ಷೆ.
Published on

ಪ್ರಮುಖ ಮುಖ್ಯಾಂಶಗಳು

  • ಐದು ಅಧಿಕಾರಿಗಳಿಗೆ ಹೆಚ್ಚಿದ ಕಾರ್ಯಭಾರ
  • ಅಧಿಕಾರಿಗಳು ಹಾಗೂ ಸಾರ್ವಜನಿಕರ ಕೆಲಸಗಳಿಗೆ ತೊಂದರೆ
ಕನಕಗಿರಿ: ಗ್ರಾಮ ಆಡಳಿತ ಅಧಿಕಾರಿಗಳ ಕೊರತೆ ಎದುರಿಸುತ್ತಿರುವ ತಾಲೂಕಿನಲ್ಲಿ ಹಲವು ದಶಕಗಳ ಹಿಂದೆ ರಚಿಸಿರುವ ಅವೈಜ್ಞಾನಿಕ ಗ್ರಾಮ ಆಡಳಿತ ಅಧಿಕಾರಿ (ವಿಎಒ) ವೃತ್ತಗಳನ್ನು ಮುಂದುವರಿಸಿರುವುದು ಅಧಿಕಾರಿಗಳು ಹಾಗೂ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗುತ್ತಿದೆ.
ಕನಕಗಿರಿ ತಾಲೂಕು ಕೇಂದ್ರವಾದ ಬಳಿಕ ಈ ಹಿಂದಿ ಇದ್ದಂತೆ 3 ಹೋಬಳಿ, ಕಂದಾಯ ಗ್ರಾಮಗಳಲ್ಲದ ತಾಂಡಾಗಳನ್ನು ಹೊರೆತುಪಡಿಸಿ ಒಟ್ಟು 64 ಗ್ರಾಮಗಳಿವೆ. ಇದರಲ್ಲಿ ಬೇಚಾರಕ ಗ್ರಾಮಗಳಾದ ಬೊಮ್ಮಚಿಹಾಳ, ಗೊರವಿ ಹಂಚಿನಾಳ, ಗುಡ್ಡದ ಲಕ್ಕುಂಪುರ, ಹಟ್ಟಿ ಹೆಸರುಗಳಿವೆ.
ತಾಲೂಕಿನಲ್ಲಿ ಈ ಹಿಂದೆ (ನಿಜಾಮರ ಕಾಲದಲ್ಲಿ) 9 ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು ರಚಿಸಿದ್ದು, ಆ ವೃತ್ತಗಳು ಈಗಲೂ ಮುಂದುವರಿದಿವೆ. ತಾಲೂಕಿನಲ್ಲಿ 5 ವಿಎಒಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಕಾರ್ಯಭಾರ ಹೆಚ್ಚಿದೆ. ಈ ನಡುವೆ ಕಾಲಕಾಲಕ್ಕೆ ಇಲಾಖೆಯಿಂದ ಹೊರಡಿಸುವ ಕಾರ್ಯ ನಿಭಾಯಿಸಲು ವೃತ್ತ ವಿಎಒಗಳ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತಿದೆ.
ಇಲಾಖೆಯ ಗಮನಕ್ಕಿಲ್ಲವೇ?
ಸಾರ್ವಜನಿಕರಿಗೆ ಸುಲಭವಾಗಿ ಸರ್ಕಾರಿ ಸೌಲಭ್ಯ ದೊರೆಯಲು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ವಿವಿಧ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದಾಖಲೆಗಳ ಗಣಕೀಕರಣ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ, ತಾಲೂಕಿನಲ್ಲಿ ಈಗಲೂ ಹಳೇ ವೃತ್ತಗಳ ಮುಂದುವರಿಸಿರುವುದು ಅಧಿಕಾರಿಗಳ ಜತೆಗೆ ಜನಸಾಮಾನ್ಯರ ಕೆಲಸಕ್ಕೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ಕಂದಾಯ ಇಲಾಖೆಯ ಗಮನಕ್ಕಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ತಿಳಿಯದ ವೃತ್ತ ರಚನೆ ವಿಧಾನ

ಜನಸಾಮಾನ್ಯರಿಗೆ ಕಂದಾಯ ಸೇರಿ ಕಾಲಕಾಲಕ್ಕೆ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಈ ಹಿಂದೆ ವೃತ್ತಗಳನ್ನು ರಚಿಸಿ ಗ್ರಾಮ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಎಷ್ಟು ಜನಸಂಖ್ಯೆ ಆಧಾರದಲ್ಲಿ ರಚಿಸಲಾಗಿದೆ ಎನ್ನುವ ಕುರಿತು ಸ್ಪಷ್ಟತೆ ಇಲ್ಲವಾಗಿದೆ. 20 ರಿಂದ 30 ಕಿ.ಮೀ ದೂರದ ಗ್ರಾಮಗಳನ್ನು ವೃತ್ತ ರಚಿಸುವಾಗ ಸೇರಿಸಿಕೊಳ್ಳಲಾಗಿದೆ. ಇದು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
  1. ಪ್ರಕರಣ 1:
ಪ್ರಕರಣ 2: ಕನ್ನೇರಮಡು ವೃತ್ತ ವ್ಯಾಪ್ತಿಯ ಅಡವಿಬಾವಿ, ಚಿಕ್ಕ ವಡ್ರಕಲ್ ಗ್ರಾಮಗಳು ಗೌರಿಪುರ ಗ್ರಾಪಂ ವ್ಯಾಪ್ತಿಗೆ ಒಳಪಟ್ಟರೆ, ಹುಲಸನಟ್ಟಿ, ಬೈಲಕ್ಕುಂಪುರ ಗ್ರಾಮಗಳು ಬಸರಿಹಾಳ ಗ್ರಾಪಂ ವ್ಯಾಪ್ತಿಯಲ್ಲಿವೆ. ಇನ್ನೂ ಕೇಂದ್ರ ಸ್ಥಾನ ಕನ್ನೇರಮಡು, ಇಂಗಳದಾಳ ಮುಸಲಾಪುರ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಗುಡುದೂರು ಗ್ರಾಮವು ಕರಡೋಣ ಗ್ರಾಪಂ ವ್ಯಾಪ್ತಿಯಲ್ಲಿದೆ. ಹೀಗೆ ಗ್ರಾಮಗಳು ಒಂದೊಂದು ಗ್ರಾಪಂಗಳಿಗೆ ಸೇರಿಸಿರುವುದು ಗ್ರಾಪಂನ ಸಹಯೋಗದಲ್ಲಿ ಕೆಲಸ ಮಾಡಬೇಕಾದರೆ ಎಲ್ಲ ಅಧಿಕಾರಿಗಳೊಂದಿಗೆ ವ್ಯವಹರಿಸಲು ಸಮಯ ಹಿಡಿಯಲಿದೆ.
ಪ್ರಕರಣ3: ತೋಳಧಾಮ ಇರುವ ಬಂಕಾಪುರ ಗ್ರಾಮ ಕಲಕೇರಿಗೆ ಸೇರಿದ್ದು, ಅಲ್ಲಿನ ಸಾರ್ವಜನಿಕರಿಗೂ ಸಂಪರ್ಕವಿಲ್ಲದ ಕಡೆಗೆ ಸಂಚರಿಸಬೇಕಿದೆ.
ಪ್ರಕರಣ4: ಕೆಲ ವೃತ್ತಗಳಲ್ಲಿ 10ರಿಂದ 12 ಗ್ರಾಮಗಳಿದ್ದರೆ, ಇನ್ನೂ ಕೆಲವು ವೃತ್ತಗಳಲ್ಲಿ 2ರಿಂದ 3 ಗ್ರಾಮಗಳಿವೆ. ನಿರ್ದಿಷ್ಟ ಜನಸಂಖ್ಯೆ ಮಾಹಿತಿ ಇಲ್ಲವಾಗಿದೆ.
ಪ್ರಕರಣ5: 26 ಸಾವಿರ ಜನಸಂಖ್ಯೆಯ ಕನಕಗಿರಿ ಸೇರಿ ಇತರ 6 ಗ್ರಾಮಗಳನ್ನು ಕನಕಗಿರಿ ವೃತ್ತದಲ್ಲಿ ಸೇರಿಸಲಾಗಿದೆ.
ಪ್ರಕರಣ 6: ಮುಸಲಾಪುರದಿಂದ ಕೂಗಳತೆ ದೂರದಲ್ಲಿರುವ ಪರಾಪುರವನ್ನು ಕನ್ನೇರಮಡು ವೃತ್ತಕ್ಕೆ ಸೇರಿಸಲಾಗಿದೆ.

ಐವರಿಂದ 64 ಹಳ್ಳಿಗಳ ನಿರ್ವಹಣೆ ಸಾಧ್ಯವೇ?

ತಾಲೂಕಿನಲ್ಲಿ ಒಟ್ಟು 64 ಹಳ್ಳಿಗಳಿದ್ದು, ಕೇವಲ 5 ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಂದ ತಾಲೂಕಿನ 64 ಹಳ್ಳಿಗಳ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ವೃತ್ತಗಳನ್ನು ಹೆಚ್ಚಿಸಿ ಅಧಿಕಾರಿಗಳನ್ನು ನೇಮಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.
"

ಹಳೇ ವೃತ್ತಗಳನ್ನೇ ಮುಂದುವರಿಸಿರುವ ವಿಚಾರ ಈಗ ತಿಳಿದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಅವಕಾಶವಿದ್ದರೆ ವೃತ್ತಗಳನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

ಯಾವ್ಯಾವ ಸರ್ಕಲ್‌ಗೆ ಎಷ್ಟು ಗ್ರಾಮಗಳು
ಕನಕಗಿರಿ - 7
ಕಲಕೇರಾ - 6
ಮುಸಲಾಪುರ - 11
ಕರಡೋಣ - 7
ಹಿರೇಡಂಕನಕಲ್ - 1
ನವಲಿ - 6
ಜೀರಾಳ - 6
ಹುಲಿಹೈದರ - 10
ಕನ್ನೇರಮಡು - 10
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net