ವಿಜೀರಾಮ್​ಜೀ ಯೋಜನೆ ಗ್ರಾಮಾಭಿವೃದ್ಧಿಗೆ ಪೂರಕ

ತಾಲೂಕಿನ ಕುಣಿಕೇರಿ ಗ್ರಾಪಂ ಆವರಣದಲ್ಲಿ ನಡೆದ 2026-&27ನೇ ಸಾಲಿನ ವಿ ಜೀರಾಮ್​ಜೀ ಯೋಜನೆ ಕ್ರಿಯಾಪಟ್ಟಿ ಸಿದ್ಧಪಡಿಸುವ ವಿಶೇಷ ಗ್ರಾಮಸಭೆಯಲ್ಲಿ ಪಿಡಿಒ ಅಂದಪ್ಪ ಅಂಗಡಿ ಮಾತನಾಡಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಂಜೀವಿನಿ ಸಿಬ್ಬಂದಿ ವೀರೇಶ, ಪಶು ವೈದ್ಯಾಧಿಕಾರಿ ವಿನಯ ಅಂಗಡಿ, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ಅಂದಪ್ಪ ಅಂಗಡಿ ಹೇಳಿಕೆ

ಕೊಪ್ಪಳ : ರೈತರು ಹಾಗೂ ಕೂಲಿಕಾರರ ಆರ್ಥಿಕ ಸದೃಢತೆಗೆ ಜಾರಿಗೊಳಿಸಿದ ವಿಕಸಿತ ಭಾರತ ಜೀರಾಮ್​ಜೀ ಯೋಜನೆಯು ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕುಣಿಕೇರಿ ಗ್ರಾಪಂ ಪಿಡಿಒ ಅಂದಪ್ಪ ಅಂಗಡಿ ಹೇಳಿದರು.

ತಾಲೂಕಿನ ಕುಣಿಕೇರಿ ಗ್ರಾಪಂ ಆವರಣದಲ್ಲಿ ಸೋಮವಾರ ನಡೆದ 2026-&27ನೇ ಸಾಲಿನ ವಿಕಸಿತ ಭಾರತ ಜೀರಾಮ್​ಜೀ ಯೋಜನೆ ಕ್ರಿಯಾಪಟ್ಟಿ ಸಿದ್ಧಪಡಿಸುವ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಗ್ರಾಪಂ ಹಾಗೂ ತೋಟಗಾರಿಕೆ, ಕೃಷಿ, ಅರಣ್ಯ ಮತ್ತು ರೇಷ್ಮೆ ಇಲಾಖೆಗಳ ಮೂಲಕ ವಿವಿಧ ಕಾಮಗಾರಿ ಅನುಷ್ಠಾನಗೊಳಿಸಲು ಅವಕಾಶವಿದೆ. ರೈತರು ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಾಮಸ್ಥರಿಂದ ಬಂದಿರುವ ಕಾಮಗಾರಿಗಳ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ಪರಿಶೀಲಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮೀಣ ಕೂಲಿಕಾರರು ಗುಳೆ ಹೋಗುವುದನ್ನು ತಡೆಯಲು ಒಂದು ಕುಟುಂಬಕ್ಕೆ ಸ್ಥಳಿಯವಾಗಿ 125 ದಿನಗಳ ಕೂಲಿ ಕೆಲಸ ನೀಡುವುದು ಯೋಜನೆಯ ಉದ್ದೇಶವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ ಹಾಗೂ ಜಲಮೂಲಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಸಂಜೀವಿನಿ ಸಿಬ್ಬಂದಿ ವೀರೇಶ, ಪಶು ವೈದ್ಯಾಧಿಕಾರಿ ವಿನಯ ಅಂಗಡಿ, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಸಿಬ್ಬಂದಿ ಸರಸ್ವತಿ, ರಮೇಶ, ದ್ವೀತಿಯ ದರ್ಜೆ ಲೆಕ್ಕಸಹಾಯಕ ಚಂದ್ರಪ್ಪ, ಗ್ರಾಪಂ ಸಿಬ್ಬಂದಿ ಹನಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net