ಹುಲಿಗೆಮ್ಮ ದೇವಿಗೆ ವಿಜಯ ಏಕಾದಶಿ ಪೂಜೆ

ವಿಜಯ ಏಕಾದಶಿ ಪ್ರಯುಕ್ತ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಗೆ ತುಳಸಿ ಮತ್ತು ಮಲ್ಲಿಗೆ ಹೂಗಳಿಂದ ವಿಶೇಷವಾಗಿ ಅಲಂಕರಿಸಿರುವುದು.
ವಿಜಯ ಏಕಾದಶಿ ಪ್ರಯುಕ್ತ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಗೆ ತುಳಸಿ ಮತ್ತು ಮಲ್ಲಿಗೆ ಹೂಗಳಿಂದ ವಿಶೇಷವಾಗಿ ಅಲಂಕರಿಸಿರುವುದು.
Published on
ಮುನಿರಾಬಾದ್: ಸಮೀಪದ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗಿ ಗ್ರಾಮದ ಆದಿಶಕ್ತಿ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ವಿಜಯ ಏಕಾದಶಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಿಗೆ ಪಂಚಾಮೃತ ಅಭಿಷೇಕ ನಂತರ, ತುಳಸಿ ದಳಗಳು ಮತ್ತು ಸುಗಂಧಭರಿತ ಮಲ್ಲಿಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಹಸಿರು ಮತ್ತು ಬಿಳಿ ಬಣ್ಣದ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ದೇವಸ್ಥಾನದ ಅರ್ಚಕರು ಮಹಾಮಂಗಳಾರತಿ ನೆರವೇರಿಸಿದರು. ಶ್ರೀಕ್ಷೇತ್ರಕ್ಕೆ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net