ಶತಮಾನಗಳ ಅವಮಾನಕ್ಕೆ ಸಿಕ್ಕ ವಿಜಯ

ತಾವರಗೇರಾದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಪ್ರಮುಖರಾದ ಬೆಟ್ಟಪ್ಪ ವಕೀಲ, ಗೌತಮ ಭಂಡಾರಿ, ಪ್ರಶಾಂತ ನಾರಿನಾಳ, ವಿಜಯ, ಮಂಜುನಾಥ ಇತರರಿದ್ದರು.
ತಾವರಗೇರಾದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಪ್ರಮುಖರಾದ ಬೆಟ್ಟಪ್ಪ ವಕೀಲ, ಗೌತಮ ಭಂಡಾರಿ, ಪ್ರಶಾಂತ ನಾರಿನಾಳ, ವಿಜಯ, ಮಂಜುನಾಥ ಇತರರಿದ್ದರು.
Published on
ತಾವರಗೇರಾ: ಇಲ್ಲಿನ ಡಾ.ಬಾಬಾ ಸಾಹೇಬರ ಮೂರ್ತಿಗೆ ಸ್ಥಳೀಯ ದಲಿತ ಮುಖಂಡರು ಪೂಜೆ ಸಲ್ಲಿಸಿ, ಪುಷ್ಪಮಾಲೆ ಹಾಕಿ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನ ಶುಕ್ರವಾರ ಆಚರಿಸಿದರು.
ಬುದ್ಧವಿಹಾರ ಅಧ್ಯಯನ ಕೇಂದ್ರದ ಡಾ.ಯರಿಸ್ವಾಮಿ ಮಾತನಾಡಿ, ಭೀಮಾ ಕೋರೆಗಾಂವ್ ವಿಜಯ ಕೇವಲ ಯುದ್ಧದ ಗೆಲುವು ಅಲ್ಲ. ಶತಮಾನಗಳ ಅವಮಾನ, ಸ್ವಾಭಿಮಾನಕ್ಕೆ ಸಿಕ್ಕ ಜಯ. ಸೈನಿಕರ ಅಸಾಧಾರಣ ಸಾಹಸಕ್ಕೆ ದೊರೆತ ಫಲ ಎಂದರು.
ಕುಷ್ಟಗಿಯ ಮಾನವ ಬಂಧುತ್ವ ವೇದಿಕೆ ಸಂಚಾಲಕ ಬೆಟ್ಟಪ್ಪ ವಕೀಲರು, ಸ್ಥಳೀಯ ಡಾ. ಅಂಬೇಡ್ಕರ್ ಸೇವಾ ಸಮಿತಿಯ ಮಂಜುನಾಥ ಚೌಡಕಿ, ಗೌತಮ್ ಭಂಡಾರಿ, ದುರಗೇಶ ದೇವರಮನಿ, ಗಣೇಶ, ಪ್ರಶಾಂತ ನಾರಿನಾಳ, ವಿಜಯ ಛಲವಾದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net