ಸಂಚಾರ ದಟ್ಟಣೆ ಸುಗಮಗೊಳಿಸಲು ವಾಹನಗಳನ್ನು ನಿಲ್ಲಿಸಲು ಕೋರಮಂಡಲ ಫ್ಯಾಕ್ಟರಿ ಜಾಗ ಹಾಗೂ ರೈಲ್ವೆ ಗೇಟಿನ ಆಚೆ ಬದಿಯಲ್ಲಿ ಹೊಸ ತುಂಗಭದ್ರ ಪ್ರೌಢಶಾಲೆಯ ಮುಂದಿನ ಬಯಲಿನಲ್ಲಿ ಹಾಗೂ ದೇವಸ್ಥಾನದ ನದಿ ಕಡೆ ಹೋಗುವ ಗೋಪುರದ ಹಿಂದಿನ ಬಯಲು ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ರ್ನಿಣಯಿಸಲಾಗಿದೆ. ಜಾತ್ರೆಯ ಪ್ರಮುಖ ದಿನಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ಕಮಾನಿನ ಒಳಗಡೆ ಬಿಡದಂತೆ ಹಾಗೂ ಜಾತ್ರಾ ಕಾಲದಲ್ಲಿ ಜನಸಂದಣಿ ತುಂಬಾ ಇರುವುದರಿಂದ, ಕಳ್ಳತನ ಪ್ರಕರಣಗಳು ತುಂಬ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಳ್ಳತನ, ಜೂಜಾಟಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.