ಕನಕಗಿರಿ ತಾಪಂ ಆವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಗೆ ಇಒ ರಾಜಶೇಖರ ಸಸಿ ನೆಟ್ಟು ಚಾಲನೆ ನೀಡಿದರು. ತಾಪಂ ಸಹಾಯಕ ನಿರ್ದೇಶಕ ನಾಗೇಶ, ಪಿಡಿಒಗಳಾದ ಬಸವರಾಜ ಸಂಕನಾಳ, ಯು.ಮಲ್ಲಿಕಾರ್ಜುನ, ಲಕ್ಷ್ಮಣ, ಕನಕಪ್ಪ ಇತರರಿದ್ದರು.
ಕನಕಗಿರಿ: ಹೊಸ ರೂಪದಲ್ಲಿ ಆರಂಭವಾಗುತ್ತಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಗ್ರಾಮೀಣ (ವಿಬಿ ರಾಮ್ ಜಿ) ಯೋಜನೆಯೂ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂಬ ಆಶಾಭಾವನೆಯಿದೆ ಎಂದು ತಾಪಂ ಇಒ ರಾಜಶೇಖರ ಹೇಳಿದರು.
ಇಲ್ಲಿನ ತಾಪಂ ಆವರಣದಲ್ಲಿ ಉದ್ಯೋಗ ನರೇಗಾ ಸವಿ ನೆನಪನ್ನು ಸ್ಮರಿಸುವ ಹಾಗೂ ವಿಬಿ-ಜಿ ರಾಮ್ (ಜಿ) ಯೋಜನೆಯ ಆರಂಭದ ನಿಮಿತ್ತ ಸಸಿ ನೆಟ್ಟು ಮಾತನಾಡಿದರು. ನರೇಗಾ ಯೋಜನೆಯು ಗ್ರಾಮೀಣಾಭಿವೃದ್ಧಿ, ಜಲಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ಗ್ರಾಮೀಣ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ಪ್ರಮುಖ ಪಾತ್ರವಹಿಸಿದೆ ಎಂದರು.
ವಿಬಿ ರಾಮ್ ಜಿ ಯೋಜನೆ ಸಿಬ್ಬಂದಿ ಸಯ್ಯದ್ ತನ್ವೀರ್, ಶಿವಕುಮಾರ ಕೆ, ಮೇಘರಾಜ, ಸಂದೀಪ, ವಿಜಯಲಕ್ಷ್ಮೀ, ಕಿಶೋರ್, ವಿಜಯ್, ಮಹೇಶರೆಡ್ಡಿ, ಚನ್ನಬಸವ, ಹನುಮಂತ, ಹೊಳೆಯಪ್ಪ, ಮಾಕರ್ಂಡೇಯ ಕಲಿಕೇರಿ ಇತರರಿದ್ದರು.