ಕೊಪ್ಪಳದ ಗಂಗಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್ ಜೆ. ವಾತ್ಸಲ್ಯ ಕಿಟ್ ವಿತರಿಸಿದರು. ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಯೋಜನಾಧಿಕಾರಿ ಜಗದೀಶ್ ಕೆ. ಎಚ್., ಜ್ಞಾನವಿಕಾಸ ಸಮನ್ವಯಧಿಕಾರಿ ಗೀತಾ, ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಕೊಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾತೃಶ್ರೀ ಅಮ್ಮನವರು ಅಸಹಾಯಕ ಕುಟುಂಬಗಳನ್ನು ಗುರುತಿಸಿ ನೀಡುತ್ತಿರುವ ಸೌಲಭ್ಯದವಾದ ವಾತ್ಸಲ್ಯ ಕಿಟ್ ಅನ್ನು ತಾಲೂಕಿನ ಫಲಾನುಭವಿ ಗಂಗಮ್ಮ ಅವರಿಗೆ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್ ಜೆ. ಅವರು ಕಿಟ್ ವಿತರಿಸಿ ಗಂಗಮ್ಮಳ ಯೋಗ ಕ್ಷೇಮ ವಿಚಾರಿಸಿ ಕಿಟ್ ಅನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಕೊಪ್ಪಳ ಪಶ್ಚಿಮ ತಾಲೂಕಿನ ಯೋಜನಾಧಿಕಾರಿ ಜಗದೀಶ್ ಕೆ. ಎಚ್., ಜ್ಞಾನವಿಕಾಸ ಸಮನ್ವಯಧಿಕಾರಿ ಗೀತಾ, ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ ಸೇವಾಪ್ರತಿನಿಧಿ ಪೂರ್ಣಿಮಾ ಇದ್ದರು.