ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ವಿವಿಧ ಸೌಲಭ್ಯ

ಹನುಮಸಾಗರ ಸಮೀಪದ ಗುಡ್ಡದೇವಲಾಪೂರ ಗ್ರಾಮದಲ್ಲಿ ದಾಖಲಾತಿ ಮತ್ತು ಹಾಜರಾತಿ ಆಂದೋಲನದ ಜಾಥಾ ವಿಜೃಂಭಣೆಯಿಂದ ನಡೆಯಿತು. ಮುಖ್ಯಶಿಕ್ಷಕ ಬಿ.ಸಿ.ಮಹೇಶ, ಎಸ್ಡಿಎಂಸಿ ಅಧ್ಯಕ್ಷ ಮಾಸಪ್ಪ ದಿಂಡೂರ, ಉಪಾಧ್ಯಕ್ಷೆ ಕಸ್ತೂರೆವ್ವ ಹೊಸಮನಿ, ಕಲಿಕೆ ಟಾಟಾ ಟ್ರಸ್ಟ್ ಸಿಬ್ಬಂದಿ ವೀರೇಶ ಹಂಚಿನಾಳ, ಆಂಜನೇಯ ಮರಿಗೌಡ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ಆಂಜನೇಯ ಮರಿಗೌಡರ ಹೇಳಿಕೆ
  • ಹಾಜರಾತಿ ಆಂದೋಲನ
ಹನುಮಸಾಗರ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಅಗತ್ಯವಾಗಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ಆಂಜನೇಯ ಮರಿಗೌಡರ ಹೇಳಿದರು.
ಸಮೀಪದ ಗುಡ್ಡದೇವಲಾಪೂರ ಗ್ರಾಮದಲ್ಲಿ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣದ ಜತೆ ವಿವಿಧ ಸೌಲಭ್ಯ ನೀಡುತ್ತಿದ್ದು, ಮಕ್ಕಳನ್ನು ನಿತ್ಯ ಶಾಲೆಗೆ ಕಳುಹಿಸಬೇಕು. ಟಾಟಾ ಟ್ರಸ್ಟ್ನಿಂದ ಕುಷ್ಟಗಿ ತಾಲೂಕಿನ 50 ಸರ್ಕಾರಿ ಶಾಲೆಗಳಲ್ಲಿ ಶಾಲಾ ಗ್ರಂಥಾಲಯ ಆರಂಭಿಸಲಾಗಿದೆ ಎಂದರು. ನಂತರ ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು. ವಿದ್ಯಾರ್ಥಿಗಳ ಕುಂಭ ಮೆರವಣಿಗೆ, ಡೊಳ್ಳು ಕುಣಿತ, ಛದ್ಮ ವೇಷ ನೋಡುಗರ ಗಮನ ಸೆಳೆಯಿತು.

ಮುಖ್ಯಶಿಕ್ಷಕ ಬಿ.ಸಿ.ಮಹೇಶ, ಎಸ್ಡಿಎಂಸಿ ಅಧ್ಯಕ್ಷ ಮಾಸಪ್ಪ ದಿಂಡೂರ, ಉಪಾಧ್ಯಕ್ಷೆ ಕಸ್ತೂರೆವ್ವ ಹೊಸಮನಿ, ಕಲಿಕೆ ಟಾಟಾ ಟ್ರಸ್ಟ್ ಸಿಬ್ಬಂದಿ ವೀರೇಶ ಹಂಚಿನಾಳ, ಆಂಜನೇಯ ಮರಿಗೌಡ, ದೈಹಿಕಶಿಕ್ಷಣ ಶಿಕ್ಷಕ ಹನಮಪ್ಪ ಮೆಣಸಗೇರಿ, ಶಿಕ್ಷಕರಾದ ಶಿವಪ್ಪ ಪಿಡ್ರಾವುತರ, ಸಂಗಮೇಶ ಸೋಬರದ, ಶೇಖರಪ್ಪ ಗೊರೆಬಾಳ, ನಿಂಗಪ್ಪ ಕೋರಿ, ಭೀಮಪ್ಪ ಗೊಡೆಕಾರ, ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟೇಶ ಧರೇಗೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net