ಕೊಪ್ಪಳದಲ್ಲಿ ನಡೆದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಉದ್ಘಾಟಿಸಿದರು. ವಿವಿ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್, ಬೀಜ ವಿಜ್ಞಾನಿ ಡಾ. ಹನುಮಂತಪ್ಪ ದಾಸರಹಳ್ಳಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಿಮ್ಮಣ್ಣ ಚವಡಿ ಸೂಚನೆ
ಮುಂಗಾರು ಬೀಜ ದಿನೋತ್ಸವ
ಕೊಪ್ಪಳ : ಜಿಲ್ಲೆಯ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸುವ ಉದ್ದೇಶದಿಂದ ಮುಂಗಾರು ಬೀಜ ದಿನೋತ್ಸವ ನಡೆಸುತ್ತಿದ್ದು. ರೈತರು ಗುಣಮಟ್ಟದ ಬೀಜ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೋಮವಾರ ನಡೆದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಭಾಗದ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವ ಸಲುವಾಗಿ ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ವಿವಿಧ ಬೆಳೆಗಳ ಪ್ರಮಾಣಿತ ಸಂಕರಣ ತಳಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಮಾತನಾಡಿ, ರೈತರಿಗೆ ಉತ್ತಮ ತಳಿ ಹಾಗೂ ಸಂಕರಣ ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ವೈಜ್ಞಾನಿಕ ವಿಧಾನದಲ್ಲಿ ಬಿತ್ತನೆ ಹಾಗೂ ನಿರ್ವಹಣೆ ಮಾಡಿದಲ್ಲಿ ಉತ್ತಮ ಫಸಲು ಪಡೆಯಬಹುದು ಎಂದು ತಿಳಿಸಿದರು.
ಬೀಜ ವಿಜ್ಞಾನಿ ಡಾ. ಹನುಮಂತಪ್ಪ ದಾಸರಹಳ್ಳಿ ಮಾತನಾಡಿ, ವಿವಿಧ ಬೆಳೆಗಳ ತಳಿ ಹಾಗೂ ಸಂಕರಣ ತಳಿಗಳ ಕುರಿತು ಮಾಹಿತಿ ನೀಡಿ. ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದಲ್ಲಿ ಉತ್ತಮ ಮೊಳಕೆ, ರೋಗ ನಿರೋಧಕ ಹಾಗೂ ಬರನಿರೋಧಕ ಶಕ್ತಿ ಹೆಚ್ಚಾಗಿ ಇಳುವರಿಯಲ್ಲಿ ಶೇ.15 ರಿಂದ 25 ರಷ್ಟು ಹೆಚ್ಚಳ ಸಾಧ್ಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ರೈತರಿಗೆ ವಿವಿಧ ಬೆಳೆಗಳ ಬೀಜಗಳನ್ನು ವಿತರಿಸಲಾಯಿತು.
ರಾಯಚೂರು ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ, ಕುಕನೂರು ತಾಲೂಕಿನ ಕೃಷಿಕ ಸಮಾಜದ ನಿರ್ದೇಶಕ ಪ್ರಕಾಶ್ ಮೇಟಿ, ಪ್ರಗತಿಪರ ರೈತರಾದ ಮುದುಕಪ್ಪ ದೇವರ, ಜೀವಂತ ಗೌಡ, ಗವಿಸಿದ್ದಪ್ಪ, ಶರಣೆಗೌಡ, ಹನುಮಂತಪ್ಪ ಇತರರಿದ್ದರು.