ಸಹಭೋಜನದಿಂದ ಮಕ್ಕಳಲ್ಲಿ ಐಕ್ಯತೆ

ಕೊಪ್ಪಳ ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕೊಪ್ಪಳ ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ ಬುತ್ತಿ-ಗೋ ಗ್ರೀನ್ ಕಾರ್ಯಕ್ರಮ
ಕೊಪ್ಪಳ :ನಾವು ಮರೆತಿರುವ ಸಹಪಂಕ್ತಿ, ಸಹಭೋಜನ ಸವಿಗಳು, ಸಹಕಾರ ಮತ್ತು ಸಮಾನತೆಯ ಮೌಲ್ಯಗಳನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಐಕ್ಯತೆ ಮತ್ತು ಮಾನವೀಯತೆ ಗುಣ ಬೆಳೆಯುತ್ತವೆ ಎಂದು ಶ್ರೀ ಶಾರದಾ ಶಾಲೆ ಪ್ರಾಚಾಯೆರ್ ಡಾ.ಕಾಂಚನ ಅಭಿಪ್ರಾಯಪಟ್ಟರು.
ತಾಲೂಕಿನ ಕಿಡದಾಳ ಶ್ರೀ ಶಾರದಾ ಇಂಟರ್​ನ್ಯಾಷನಲ್​ ಶಾಲೆಯಲ್ಲಿ ಶನಿವಾರ ಮನೆ ಬುತ್ತಿ&ಗೋ ಗ್ರೀನ್​ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗುವಿನ ಹೆಸರಿನಲ್ಲಿ ಒಂದು ಚಿರ ನೆನಪು ಉಳಿಯುವಂತೆ "ನನ್ನ ಶಾಲೆ&ನನ್ನ ಗಿಡ&ನನ್ನ ನೆನಪು' ಪರಿಸರ ಕಾಳಜಿ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಮಕ್ಕಳು ಪ್ರೀತಿ, ಕಾಳಜಿಯಿಂದ ಬೆಳೆಯುವಂತೆ ಗಿಡವೂ ಬೆಳೆದು ಒಂದು ನೆನಪಾಗಿ ಉಳಿಯಲಿದೆ. ಇದೇ ಉದ್ದೇಶಕ್ಕಾಗಿ ಕಾರ್ಯಕ್ರಮ ರೂಪಿಸಿದ್ದಾಗಿ ತಿಳಿಸಿದರು.
ಶ್ರೀ ಶಾರದಾ ಸಂಸ್ಥೆಯ ನಿರ್ದೇಶಕ ಕಿರಣ್​ ಕುಮಾರ್​ ವಿ. ಪಾಟೀಲ್​, ಟ್ರಸ್ಟಿಗಳಾದ ನೀಲಾಂಬಿಕಾ ಪಾಟೀಲ್​ ಹಾಗೂ ಕುಮಾರಿ ಪೂಜಾ ವಿ. ಪಾಟೀಲ್​ ಅಭಿಪ್ರಾಯ ಹಂಚಿಕೊಂಡರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಸಸಿಗಳನ್ನು ಶಾಲೆಗೆ ನೀಡಿದರು. ಜತೆಗೆ ತಾವೇ ತಯಾರಿಸಿ ತಂದಿದ್ದ ಮನೆ ಬುತ್ತಿ ಊಟ ಬಡಿಸಿ ಸಹ ಭೋಜನ ಮಾಡಿ ಸಂಭ್ರಮಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net