ಉತ್ಸವಗಳಲ್ಲಿ ಪರಂಪರೆ ಬಿಂಬಿಸುವ ಕೆಲಸವಾಗಲಿ

ಗಂಗಾವತಿ ಶ್ರೀ ಗಂಗಾಧರೇಶ್ವರ ದೇವಾಲಯ ಆವರಣದಲ್ಲಿ ಮಹಿಳಾ ಘಟಕ ಹಮ್ಮಿಕೊಂಡಿದ್ದ ಯುಗಾದಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿತ್ರ ನಿರ್ಮಾಪಕಿ ಮತ್ತು ಕರುಣಾ   ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಸೋಮವಾರ ಉದ್ಘಾಟಿಸಿದರು.ನಿವೃತ್ತ ಪ್ರಾಚಾರ್ಯೆ ಡಿ.ಜಿ.ಮಠದ್, ಹಿರಿಯ ವಕೀಲೆ ಕವಿತಾ ಗುರುಮೂರ್ತಿ ಇತರರಿದ್ದರು.

Published on
ಗಂಗಾವತಿ: ಯುವ ಸಮುದಾಯಕ್ಕೆ ದೇಶದ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಪಾಲಕರು ತಿಳಿಸಬೇಕಿದ್ದು, ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸುವಂತೆ ಚಿತ್ರ ನಿರ್ಮಾಪಕಿ ಮತ್ತು ಕರುಣಾ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಹೇಳಿದರು.
ನಗರದ ಜಯನಗರ ಶ್ರೀ ಗಂಗಾಧರೇಶ್ವರ ದೇವಾಲಯ ಆವರಣದಲ್ಲಿ ಮಹಿಳಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಯುಗಾದಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಸಂಪ್ರದಾಯ ಹಬ್ಬಗಳ ಮಾಹಿತಿ ನೀಡಬೇಕಿದ್ದು, ಧಾರ್ಮಿಕ ಮತ್ತು ವೈಜ್ಞಾನಿಕ ಕುರಿತ ತಿಳಿವಳಿಕೆ ಮುಖ್ಯ. ಉತ್ಸವಗಳು ಮನರಂಜನೆಗೆ ಸೀಮಿತವಾಗದೇ ಪರಂಪರೆ ಬಿಂಬಿಸುವ ಕಾರ್ಯಕ್ರಮವಾಗಬೇಕಿದೆ ಎಂದರು.
ನಿವೃತ್ತ ಪ್ರಾಚಾರ್ಯೆ ಡಿ.ಜಿ.ಮಠದ್ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ಛಾಪು ಮೂಡಿಸಬೇಕಿದ್ದು, ಸ್ವಾವಲಂಬಿಗಳಾಗಬೇಕಿದೆ ಎಂದರು.
ಮಹಿಳೆಯರಿಗೆ ಪರಂಪರೆ ಬಿಂಬಿಸುವ ಆಟೋಟಗಳನ್ನು ಆಯೋಜಿಸಲಾಗಿತ್ತು. ಹಿರಿಯ ವಕೀಲೆ ಕವಿತಾ ಗುರುಮೂರ್ತಿ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ದೊಡ್ಡಬಸಮ್ಮ ಗುರುವಿನಮಠ ಹಾಗೂ ಪದಾಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net