ಕೊಪ್ಪಳದಲ್ಲಿ ಯುಗಾದಿ ಸಂಭ್ರಮ

ಕೊಪ್ಪಳ ಕೋಟೆ ರಸ್ತೆಯಲ್ಲಿರುವ ಕಲ್ಲಿಗ ಮಾರುತೇಶ್ವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಕೊಪ್ಪಳ ಕೋಟೆ ರಸ್ತೆಯಲ್ಲಿರುವ ಕಲ್ಲಿಗ ಮಾರುತೇಶ್ವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾತ್ರೆಯ ಸಡಗರ
ಕೊಪ್ಪಳ :ಭಾರತೀಯ ಸಂಸತಿಯ ಹೊಸ ವರ್ಷವಾದ ಯುಗಾದಿ ಹಬ್ಬವನ್ನು ಕೊಪ್ಪಳ ನಗರ ಹಾಗೂ ಜಿಲ್ಲೆಯಾದ್ಯಂತ ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ನಗರದ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ, ಅಭಿಷೇಕಗಳು ಹಾಗೂ ಮಹಾ ರಥೋತ್ಸವ, ಲು ರಥೋತ್ಸಗಳು ಜರುಗಿದವು. ಭಕ್ತರು ಪರಸ್ಪರ ಬೇವು-ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
ಕೊಪ್ಪಳದ 26 ವಾರ್ಡನ ವಿಜಯ ನಗರ ಕಾಲೋನಿಯ ಶ್ರೀ ವೀರಾಂಜನೇಯ ಜಾತ್ರಾ ಮಹೋತ್ಸವ ಅಂಗವಾಗಿ 25 ಕಂಬಗಳನ್ನು ಹೊತ್ತುಕೊಂಡು ಡೊಳ್ಳು ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ಮಾಡಲಾಯಿತು. ಶ್ರೀ ವೀರಾಂಜನೇಯ ದೇವಾಲಯದಲ್ಲಿ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಯಿತು. ಸಂಜೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷದ ಜಾತ್ರೆಯನ್ನು ಶ್ರೀ ವೀರಾಂಜನೇಯ ದೇವಸ್ಥಾನ ಸೇವಾ ಟ್ರಸ್ಟ್​ನಿಂದ ಜಾತ್ರೆ ನಡೆಸಲಾಯಿತು. ರಾತ್ರಿಯಂದು ಮದ್ದು ಸುಡಲಾಯಿತು.
ಒಂದನೇ ವಾರ್ಡ್​ನಲ್ಲಿರುವ ಪುರಾತನ ವಡಕರಾಯ ದೇವಸ್ಥಾನದಲ್ಲಿ ಯುಗಾದಿ ನಿಮಿತ್ತ ವಿಶೇಫಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗಾಗಿ ಅನ್ನಪ್ರಸಾದ ಸೇವೆ ಆಯೋಜಿಸಲಾಗಿತ್ತು.

ಭಾಗ್ಯನಗರದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ

ತಾಲೂಕಿನ ಭಾಗ್ಯನಗರದಲ್ಲಿ ಯುಗಾದಿ ಹಬ್ಬದಂದು ಗುರುವಾರ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ನೆರವೇರಿತು. ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಮಾಡಲಾಗಿತ್ತು. ಸಂಜೆ ನಡೆದ ಮಹಾ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಯಿತು. ಭಕ್ತರು ರಥಕ್ಕೆ ಹೂವು-&ಹಣ್ಣು ಸಮರ್ಪಿಸಿ ಭಕ್ತಿಭಾವ ಮೆರೆದರು. ಬಂದಂತಹ ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಿರೇಮನ್ನಾಪುರದಲ್ಲಿ ಶ್ರೀ ಮಾರುತೇಶ್ವರ ಲಘು ರಥೋತ್ಸವ ಸಂಭ್ರಮ

ಕುಷ್ಟಗಿ: ಜಿಲ್ಲೆಯ ಹಿರೇಮನ್ನಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಸ್ವಾಮಿಗೆ ವಿಶೇಷ ಪೂಜೆ ಹಾಗೂ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ನೆರವೇರಿಸಲಾಯಿತು.
ಸಂಜೆ ಗ್ರಾಮದ ಸಕಲ ಗುರುಹಿರಿಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಘು ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತಾದಿಗಳು ಲುರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿತ್ತು.

ಡಂಬರಹಳ್ಳಿಯಲ್ಲಿ ಮಹಾರಥೋತ್ಸವದ ಇಂದು

ಕೊಪ್ಪಳ : ತಾಲೂಕಿನ ಡಂಬರಹಳ್ಳಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ. 21ರಂದು ಸಂಜೆ 5.30ಕ್ಕೆ ಜರುಗಲಿರುವ ಭವ್ಯ ಮಹಾರಥೋತ್ಸವಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಉಜ್ಜಯನಿ ಶಾಖಾಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸನ್ನಿಧಿವಹಿಸಲಿದ್ದಾರೆ.
ಜಾತ್ರೆಯ ವಿಶೇಷತೆಯಾಗಿ ನೂರಾರು ಡೊಳ್ಳಿನ ಮೇಳಗಳ ಮೆರವಣಿಗೆ ಜರುಗಲಿದ್ದು, ಮಾ. 22ರಂದು ಅಗ್ನಿಕೊಂಡ ಹಾಯುವುದು, ಮುಳ್ಳುಪಲ್ಲಕ್ಕಿ ಹಾಗೂ ಬ್ಯಾಟಿಗಿಡದಂತಹ ಸಾಹಸಮಯ ಕಾರ್ಯಕ್ರಮಗಳು ನಡೆಯಲಿವೆ. ಅಂದು ರಾತ್ರಿ 10 ಗಂಟೆಗೆ ಗರತಿ ಹೆಣ್ಣಿಗೆ ಗರ್ವದ ಗಂಡ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾದಿಗಳಿಗೆ ಶ್ರೀ ರಾಮಚಂದ್ರಗೌಡ ಪಾಟೀಲ್​ ಅವರಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಜಾತ್ರಾ ಸಮಿತಿ ಕೋರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net