ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಪೆ.ಲಿ., ಕಾಸನಕಂಡಿ ಎಚ್ಆರ್ಜಿ ಅಲಾಯನ್ಸ್ ಆಂಡ್ ಸ್ಟೀಲ್ಟ್ ಪೆ.ಲಿ., ಹಿರೇ ಬಗನಾಳದ ವನ್ಯ ಸ್ಟೀಲ್ಸ್ ಮತ್ತು ಹಾಲವರ್ತಿಯ ಪಿಬಿಎಸ್ ಪವರ್ ಆ್ಯಂಡ್ ಸ್ಟೀಲ್ಸ್ಗೆ ಏಪ್ರೀಲ್ 9ರಂದು ಕ್ಲೋಸರ್ ನೋಟಿಸ್ ನೀಡುವಂತೆ ಮಂಡಳಿ ಸಭೆಯಲ್ಲಿ ಠರಾವು ಅನುಮೋದಿಸಲಾಗಿದೆ. ಅದರಂತೆ ಗುರುವಾರ ಎರಡು ಕಂಪನಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಲಾಗಿದೆ. ಬಾಕಿ ಮೂರು ಕೈಗಾರಿಕಗಳ ಕ್ಲೋಸರ್ ಆರ್ಡರ್ ಬಂದ ನಂತರ ಬಂದ್ ಮಾಡುವುದಾಗಿ ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದರು.