ಬೋರ್ಡ್ ನಿರ್ಲಕ್ಷ್ಯಕ್ಕೆ 19ನೇ ಗೇಟ್ ಸಂಪೂರ್ಣ ಕಿತ್ತು ಹೋಗಿದೆ. ಬಾಕಿ 32ರಲ್ಲಿ 11, 18, 20, 24, 27,28 ಸಂಖ್ಯೆ ಗೇಟ್ ಗಳು ಸಂಪೂರ್ಣ ಸಾಮರ್ಥ್ಯ ಕಳೆದುಕೊಂಡಿವೆ. ಮತ್ತೊಂದು ಗೇಟ್ ಕೇವಲ ಎರಡು ಅಡಿವರಗೆ ಎತ್ತರಿಸುವಷ್ಟು ಶಕ್ತಿ ಉಳಿಸಿಕೊಂಡಿದೆ. ಉಳಿದ ಗೇಟ್ ಗಳ ಸಾಮರ್ಥ್ಯ ಶೇ.50 ರಷ್ಟು ಕುಸಿದಿದೆ. ಮೊದಲ ಹಂತದಲ್ಲಿ 19ನೇ ಗೇಟ್ ಸೇರಿ ಸಂಪೂರ್ಣ ಶಕ್ತಿ ಕಳೆದುಕೊಂಡ ಗೇಟ್ ಗಳನ್ನು ತೆರವು ಮಾಡಿ ಹೊಸ ಗೇಟ್ ಅಳವಡಿಸಬೇಕು. ನಂತರದಲ್ಲಿ ಬಾಕಿ ಗೇಟ್ ಗಳ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಒಂದೊಮ್ಮೆ ಮೇ ಒಳಗೆ ಹೊಸ ಗೇಟ್ ಅಳವಡಿಕೆ ಪೂರ್ಣವಾಗದಿದ್ದಲ್ಲಿ ಇರುವ ಗೇಟ್ ಬಳಸಿ ನೀರು ನಿರ್ವಹಣೆ ಮಾಡಬಹುದು. ರೈತರಿಗೂ ನೀರೊದಗಿಸಿ ಬೆಳೆ ರಕ್ಷಿಸಿಕೊಳ್ಳಲು ಅವಕಾಶವಿರಲಿದೆ ಎಂಬುದು ರಾಜ್ಯದ ಇಂಜಿನಿಯರ್ ಗಳ ಒತ್ತಾಸೆ. ಆದರೆ, ಬೋರ್ಡ್ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ರಾಜ್ಯ ಸರ್ಕಾರವೂ ಬೋರ್ಡ್ ಹಾಗೂ ಗುತ್ತಿಗೆ ಕಂಪನಿ ಕಾರ್ಯಾಚರಣೆ ವಿಧಾನ, ಮುಂದಿನ ಕಾರ್ಯತಂತ್ರ ಹಾಗೂ ಆಗಬಹುದಾದ ಲಾಭ-ನಷ್ಟದ ತುಲನಾತ್ಮಕ ಲೆಕ್ಕಾಚಾರ ಹಾಕುತ್ತಿಲ್ಲ ಎನ್ನಲಾಗಿದೆ.