ಅಳವಂಡಿ ಸಮೀಪದ ತಿಗರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರು, ಸದಸ್ಯರಾದ ಮಲ್ಲೇಶಪ್ಪ ಸಂಗಮೇಶ್ವರ, ಹನುಮೇಶ ಕುಂಟಗೇರಿ, ಮುಖ್ಯ ಶಿಕ್ಷಕ ಬಾಬು ಹಕ್ಕಂಡಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿಕ್ಷಕ ಮಲ್ಲಿಕಾರ್ಜುನ ಯತ್ನಳ್ಳಿ ಅಭಿಮತ
ಅಳವಂಡಿ ತಿಗರಿ ಮಡಿವಾಳ ಮಾಚಿದೇವ ಜಯಂತಿ
ಅಳವಂಡಿ: ಕಾಯಕ ತತ್ವವನ್ನು ಎತ್ತಿಹಿಡಿದ ಮಹಾನ್ ದಾರ್ಶನಿಕ ಮಡಿವಾಳ ಮಾಚಯ್ಯನವರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ ಮಲ್ಲಿಕಾರ್ಜುನ ಯತ್ನಳ್ಳಿ ತಿಳಿಸಿದರು.
ಸಮೀಪದ ತಿಗರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಶ್ರೇಷ್ಠ ದಾರ್ಶನಿಕ ಮಡಿವಾಳ ಮಾಚಿದೇವರು ತಮ್ಮ ಕಾಯಕ ತತ್ವವನ್ನು ಬಿಡದೆ ತ್ರಿಕರಣ ಶುದ್ಧಿಯಿಂದ ಸಂಸ್ಕಾರಯುತ ಜೀವನ ನಡೆಸಲು ಸನ್ಮಾರ್ಗ ತೋರಿದರು. ವಿಶಿಷ್ಟ ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು. ತಮ್ಮ ಕಾಯಕದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದರು.
ಜಯಂತಿ ನಿಮಿತ್ತ ಶಾಲಾ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರು, ಸದಸ್ಯರಾದ ಮಲ್ಲೇಶಪ್ಪ ಸಂಗಮೇಶ್ವರ, ಮುಖ್ಯಶಿಕ್ಷಕ ಬಾಬು ಹಕ್ಕಂಡಿ, ಶಿಕ್ಷಕರಾದ ನಾಗರಾಜ, ಸಿದ್ದಪ್ಪ, ಯಮನೂರಸಾಬ, ರೂಪಾ, ಭಾರತಿ, ಕವಿತಾ, ಉಮಾ, ಅನಿತಾ ಹಾಗೂ ಶಶಿಕಲಾ ಹಾಜರಿದ್ದರು.