ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಪಂ ಎಡಿ ಹನಮಂತಗೌಡ ಪೊಲೀಸ್ ಪಾಟೀಲ್ಗೆ ಡೇಟಾ ಎಂಟ್ರಿ ಆಪರೇಟರ್ಸ್ ಮನವಿ ಸಲ್ಲಿಸಿದರು. ಪಿಡಿಒ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಗೌಡ ಮೂಲಿಮನಿ, ಅಕೌಂಟ್ ಆಫೀಸರ್ ಹಜರತ್ ಅಲಿ, ವಿಷಯ ನಿರ್ವಾಹಕ ಬಸವರಾಜ ಹಳ್ಳಿ, ಪಿಡಿಒಗಳಾದ ರೇಣುಕಾ ಟಂಕದ, ಅಬ್ದುಲ್ ಗಫಾರ್, ಕಂಪ್ಯೂಟರ್ ಆಪರೇಟರ್ ಮುರಾರಿರಾವ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯಲಬುರ್ಗಾ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ಸ್ ದಿನ
ತಾಪಂ ಎಡಿ ಹನಮಂತಗೌಡ ಪೊಲೀಸ್‌ಪಾಟೀಲ್ ಆಶಯ
ಯಲಬುರ್ಗಾ: ಕಂಪ್ಯೂಟರ್ ಆಪರೇಟರ್ಸ್ ಧನಾತ್ಮಕವಾಗಿ ಚಿಂತನೆ ಮಾಡಿ, ತಮ್ಮ ವೃತ್ತಿಯನ್ನು ಗೌರವದಿಂದ ಕಾಣಬೇಕು ಎಂದು ತಾಪಂ ಎಡಿ ಹನಮಂತಗೌಡ ಪೊಲೀಸ್‌ಪಾಟೀಲ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಪಂಯಿಂದ ಹಮ್ಮಿಕೊಂಡಿದ್ದ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ 234ನೇ ಹುಟ್ಟು ಹಬ್ಬ ನಿಮಿತ್ತ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಮಟ್ಟದಲ್ಲಿ ತಮ್ಮನ್ನು ಗುರುತಿಸಿ ಸರ್ಕಾರ ಪ್ರತಿವರ್ಷ ದಿನಾಚರಣೆ ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರದ ಆಶಯದಂತೆ ಕೆಲಸ ಮಾಡಿ, ಸೇವಾ ಭದ್ರತೆ ಹಾಗೂ ವೇತನ ಪಡೆಯಲು ಹೋರಾಡುತ್ತಿರುವ ನಿಮ್ಮ ಬೇಡಿಕೆ ಈಡೇರಲಿ ಎಂದು ಆಶಿಸಿದರು.
1832ರಲ್ಲಿ ಮಾನವ ತಪ್ಪುಗಳನ್ನು ಹಾಗೂ ಅಂಕಿ-ಸಂಖ್ಯೆಯನ್ನು ಸರಳವಾಗಿ ಬಳಸಲು ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಕಂಡುಹಿಡಿದರು. ಈಗ ಪ್ರತಿಯೊಬ್ಬರೂ ಕಂಪ್ಯೂಟರ್ ಬಳಸುವಂತಾಗಿದೆ. ಬ್ಯಾಬೇಜ್ ಅವರು ಕೊಟ್ಟ ಕೊಡುಗೆ ಇಂದು ಕೋಟ್ಯಂತರ ಜನರ ಜೀವನಕ್ಕೆ ದಾರಿಯಾಗಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಮಾತನಾಡಿ, ಪ್ರಪಂಚದಲ್ಲಿ ಏನೆಲ್ಲ ಆಗುತ್ತಿದೆಯೋ, ಅದನ್ನು ಕ್ಷಣಾರ್ಧದಲ್ಲಿ ಕಂಪ್ಯೂಟರ್ ಮೂಲಕ ತಿಳಿಯುವಂತೆ ಮಾಡಿರುವ ಚಾರ್ಲ್ಸ್ ಬ್ಯಾಬೇಜ್ ಅವರ ಕೊಡುಗೆ ಅಪಾರ ಎಂದರು.