ಶ್ರೀಶೈಲಕ್ಕೆ ಶಿವ ಮಾಲಾಧಾರಿಗಳ ಪಯಣ

ಸಿದ್ದಾಪುರದಲ್ಲಿ ಶಿವರಾತ್ರಿ ನಿಮಿತ್ತ ಶಿವ ಮಾಲಾಧಾರಿಗಳು ಶ್ರೀಶೈಲಕ್ಕೆ ಗುರುವಾರ ಪ್ರಯಾಣ ಬೆಳೆಸಿದರು.
ಸಿದ್ದಾಪುರದಲ್ಲಿ ಶಿವರಾತ್ರಿ ನಿಮಿತ್ತ ಶಿವ ಮಾಲಾಧಾರಿಗಳು ಶ್ರೀಶೈಲಕ್ಕೆ ಗುರುವಾರ ಪ್ರಯಾಣ ಬೆಳೆಸಿದರು.
Published on
ಸಿದ್ದಾಪುರ: ಮಹಾಶಿವರಾತ್ರಿ ನಿಮಿತ್ತ ಗ್ರಾಮದ 30ಕ್ಕೂ ಹೆಚ್ಚು ಶ್ರೀಶೈಲ ಶಿವ ಮಾಲಾಧಾರಿಗಳು ಗುರುವಾರ ವಾಹನ ಮೂಲಕ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದರು.
ಇಲ್ಲಿನ ಬಸವಣ್ಣ ವೃತ್ತದ ಬಳಿಯ ಗೂಳಿಬಸವೇಶ್ವರ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಶೈಲ ಪೀಠದಲ್ಲಿ ಮಾಲಾಧಾರಿಗಳು ಹಾಗೂ ಗ್ರಾಮದ ಹಿರೇಮಠದ ಉಮೇಶ ತಾತ, ವಿನಯಕುಮಾರ ಸ್ವಾಮಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಿಕಾರ್ಜುನಗೆ ವಿಶೇಷ ಪೂಜೆ, ಅಭಿಷೇಕ, ಪುಷ್ಪಾಲಂಕಾರ ಇತರ ಧಾರ್ಮಿಕ ಕಾರ್ಯಗಳು ನೆರವೇರಿದವು.
ಶಿವ ಮಾಲಾಧಾರಿ ಹಾಗೂ ಗುರುಶಿವ ಬಸವರಾಜ ಗುಂಡದ್, ಕನ್ಯಾಮಾಲಾಧಾರಿಗಳಿಗೆ ಇರುಮುಡಿ ಕಟ್ಟಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವ ಮಾಲಾಧಿಕಾರಿಗಳು ಮೆರವಣಿಗೆ ನಡೆದರು. ಮಾಲಾಧಿಕಾರಿಗಳ ಕುಟುಂಬಸ್ಥರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net