ಸಾವಯವ ಕೃಷಿಯಿಂದ ಅನುಕೂಲ ಅನೇಕ

ಗಂಗಾವತಿ ಕೆವಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರಗಳ ವೈಜ್ಞಾನಿಕ ಬಳಕೆ ಕುರಿತ ತರಬೇತಿ ಕಾರ್ಯಾಗಾರವನ್ನು ಕೃಷಿ ಮಹಾವಿದ್ಯಾಲಯ ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ ಮಂಗಳವಾರ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ಶಿವಶೇಖರ್ ಪಾಟೀಲ್, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಮಳಗಿ ಇತರರಿದ್ದರು.
ಗಂಗಾವತಿ ಕೆವಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರಗಳ ವೈಜ್ಞಾನಿಕ ಬಳಕೆ ಕುರಿತ ತರಬೇತಿ ಕಾರ್ಯಾಗಾರವನ್ನು ಕೃಷಿ ಮಹಾವಿದ್ಯಾಲಯ ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ ಮಂಗಳವಾರ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ಶಿವಶೇಖರ್ ಪಾಟೀಲ್, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಮಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ ಅನಿಸಿಕೆ
  • ತರಬೇತಿ ಕಾರ್ಯಾಗಾರ ಉದ್ಘಾಟನೆ
ಗಂಗಾವತಿ: ಭೂಮಿಯ ಲವತ್ತತೆ ಉಳಿಸಿಕೊಳ್ಳಲು ಮತ್ತು ಉತ್ತಮ ಇಳುವರಿ ಪಡೆಯಲು ರೈತರು ಸಾವಯವ ಗೊಬ್ಬರ ಬಳಕೆ ಮತ್ತು ಮಣ್ಣಿನ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಕೃಷಿ ಮಹಾವಿದ್ಯಾಲಯ ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ ತಿಳಿಸಿದರು.
ನಗರದ ಕೆವಿಕೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರಗಳ ವೈಜ್ಞಾನಿಕ ಬಳಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕೃಷಿಭೂಮಿಯಲ್ಲಿ ಸಾವಯವ ಗೊಬ್ಬರ ತಯಾರಿಕೆ ಘಟಕ ಹೊಂದಬೇಕಿದ್ದು, ಗೋವು ಸಾಕಣೆಯಿಂದ ಪೋಷಕಾಂಶಯುಕ್ತ ಗೊಬ್ಬರ ತಯಾರಿಸಲು ಸಾಧ್ಯ. ಸಾವಯವ ಗೊಬ್ಬರ ಮಣ್ಣಿಗೆ ನೀಡುವುದರಿಂದ ಲವತ್ತತೆ ಉಳಿಸಿಕೊಳ್ಳಲು ಸಾಧ್ಯ ಎಂದರು.
ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಚನ್ನಪ್ಪ ಮಳಗಿ ಮಾತನಾಡಿ, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ಹಾಳಾಗಿದ್ದು, ಆಹಾರ ಧಾನ್ಯದ ಪೋಷಕಾಂಶದ ಮೇಲೂ ಪರಿಣಾಮ ಬೀರಿದೆ. ಮಣ್ಣಿನ ರಕ್ಷಣೆ, ಸಾವಯವ ಮತ್ತು ಸಮಗ್ರ ಕೃಷಿಯತ್ತ ರೈತರನ್ನು ಕೊಂಡೊಯ್ಯಬೇಕಿದೆ ಎಂದರು.
ನ್ಯಾನೋರಸಗೊಬ್ಬರಗಳ ಉಪಯುಕ್ತತೆ ಮತ್ತು ಮಣ್ಣಿನ ಲವತ್ತತೆ ಕುರಿತು ಇ್ಕೆೆ ಸಂಸ್ಥೆ ನಿರ್ದೇಶಕ ಅಮರೇಶ ಉಪಲಾಪುರ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಶಿವಶೇಖರ್ ಪಾಟೀಲ್, ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್, ಇ್ಕೆೆ ಸಂಸ್ಥೆ ಕ್ಷೇತ್ರಾಧಿಕಾರಿ ಡಾ.ಗೋವಿಂದರಾಜ, ಪ್ರಮುಖರಾದ ಕನಕಪ್ಪ ಮಳಗಾವಿ, ಬಸವರಾಜ ಚಲವಾಡಗಿ, ಕೆವಿಕೆ ತಜ್ಞರಾದ ಡಾ.ಆರ್.ಜ್ಯೋತಿ ಆರ್, ಡಾ.ಜೆ.ರಾಧಾ, ಡಾ.ಮಲ್ಲೇಶ, ಡಾ.ಜಿ.ನಾರಪ್ಪ, ಆರ್.ಎಂ.ರೇವತಿ, ತಾಂತ್ರಿಕಾಧಿಕಾರಿ ಎನ್.ಶ್ರುತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net