ಮಹಿಳಾ ಸ್ವಾವಲಂಬಿ ಜೀವನಕ್ಕೆ ತರಬೇತಿ

ಹಣವಾಳ ಗ್ರಾಮದಲ್ಲಿ ರೀಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಉಚಿತ ಕಾರ್ಯಾಗಾರವನ್ನು ರೋಟರಿ ಕ್ಲಬ್ ರೈಸ್ ಬೌಲ್ ಅಧ್ಯಕ್ಷೆ ಬಸಮ್ಮ ಶರಣಪ್ಪ ಹಣವಾಳ ಉದ್ಘಾಟಿಸಿದರು. ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮಲ್ಲೇಶಪ್ಪ ಜಾಧವ್, ಸಂಚಾಲಕ ಸುರೇಶ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೀಡ್ಸ್ ಯೋಜನಾ ವ್ಯವಸ್ಥಾಪಕ ಮಲ್ಲೇಶಪ್ಪ ಜಾಧವ್ ಹೇಳಿಕೆ
  • ಗಂಗಾವತಿ ಹಣವಾಳ ಹೊಲಿಗೆ ತರಬೇತಿ ಕಾರ್ಯಾಗಾರ
ಗಂಗಾವತಿ: ಮಹಿಳಾ ಸ್ವಾವಲಂಬನೆಗೆ ಪೂರಕವಾದ ಯೋಜನೆಗಳೊಂದಿಗೆ ತರಬೇತಿ ನೀಡುವುದರ ಜತೆಗೆ ಅಗತ್ಯ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮಲ್ಲೇಶಪ್ಪ ಜಾಧವ್ ಹೇಳಿದರು.
ಹಣವಾಳ ಗ್ರಾಮದ ರೀಡ್ಸ್ ಸಂಸ್ಥೆ ಕಚೇರಿಯಲ್ಲಿ ಕಿಶೋರಿಯರಿಗಾಗಿ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಸ್ವಯಂ ಉದ್ಯೋಗದ ತರಬೇತಿ ನೀಡಲಾಗುತ್ತಿದೆ. ಹೊಲಿಗೆ ತರಬೇತಿ ಕಾರ್ಯಾಗಾರದ ಜತೆಗೆ ತರಬೇತಿ ಪೂರ್ಣಗೊಳಿಸಿದ ಕಿಶೋರಿಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ ಎಂದರು. ರೀಡ್ಸ್ ಸಂಸ್ಥೆ ಕಾರ್ಯ ಚಟುವಟಿಕೆ, ತರಬೇತಿ ಕಾರ್ಯಾಗಾರದ ಉದ್ದೇಶ ಮತ್ತು ಮಹಿಳಾ ಸ್ವಾವಲಂಬನೆ ಯೋಜನೆ ಕುರಿತು ಸಂಚಾಲಕ ಸುರೇಶ ಮಾಹಿತಿ ನೀಡಿದರು. ರೋಟರಿ ಕ್ಲಬ್ ರೈಸ್ ಬೌಲ್ ಅಧ್ಯಕ್ಷೆ ಬಸಮ್ಮ ಶರಣಪ್ಪ ಹಣವಾಳ್, ಗ್ರಾಪಂ ಎನ್‌ಆರ್‌ಎಲ್‌ಎಂ ಪ್ರತಿನಿಧಿಗಳಾದ ಕೀರ್ತಿ, ಶಿವಲೀಲಾ ಜಗದೀಶ, ಬಸಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net