ತರಬೇತಿಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಸಾಧ್ಯ

ಕೊಪ್ಪಳದ ಸರದಾರಗಲ್ಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ 5 ದಿನಗಳ ಮರುಸಿಂಚನ ಜ್ಞಾನಸೇತು ಮೌಲ್ಯ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಬಿ.ಮಂಜುನಾಥ್ ಉದ್ಘಾಟಿಸಿದರು. ಡಯಟ್ ಹಿರಿಯ ಉಪನ್ಯಾಸಕ ಗವಿಸಿದ್ದೇಶ್ವರಸ್ವಾಮಿ ಬೆನಕಲ್ಮಠ, ಜಿಪಿಟಿ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ವಾರುತಿ ವ್ಯಾಗಳಮನಿ, ತಾಲೂಕು ನೋಡಲ್ ಮಂಜುನಾಥ, ಶೋಭನಾ, ಸುಮಂಗಲಾ, ಹನುಮರೆಡ್ಡಿ, ನೇತ್ರಾವತಿ ಹಳ್ಳಿ, ಗವಿಸಿದ್ದಪ್ಪ, ವೀರೇಶ ಮೇಟಿ, ಮರ್ದಾನಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತರಬೇತಿ

ತರಬೇತಿಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಸಾಧ್ಯ

ಕೊಪ್ಪಳ: ಮಕ್ಕಳಲ್ಲಿ ಕೇವಲ ಪಠ್ಯದ ಜ್ಞಾನ ಅಲ್ಲದೆ, ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಕಲಿಸುವುದು ಅವಶ್ಯಕ ಎಂದು ಡಯಟ್ ಹಿರಿಯ ಉಪನ್ಯಾಸಕ ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರ ಸ್ವಾಮಿ ಬೆನಕಲ್ಮಠ ಹೇಳಿದರು.
ನಗರದ ಸರದಾರಗಲ್ಲಿ ಸಹಿಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಪಿಎಬಿ ಅನುಮೋದಿತ 6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ ಇತ್ತಿಚೇಗೆ ಆಯೋಜಿಸಿದ್ದ 5 ದಿನಗಳ ಮರುಸಿಂಚನ ಜ್ಞಾನಸೇತು ಮೌಲ್ಯ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ವಾತನಾಡಿದರು. ಶಿಕ್ಷಕರು ತರಬೇತಿಯಲ್ಲಿ ಪಡೆದ ಜ್ಞಾನ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು.
ಇದರಿಂದ ಬೋಧನಾ ಕೌಶಲ ಉತ್ತಮವಾಗುವುದರ ಜತೆ ಮಕ್ಕಳಲ್ಲಿ ಸಮಯ ಪಾಲನೆ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತಲು ಸಾಧ್ಯವಾಗುತ್ತದೆ. ಜ್ಞಾನಸೇತು, ಮರುಸಿಂಚನ ಹಾಗೂ ಪೋಕ್ಸೋ ಕಾಯ್ದೆಯಂಥ ವಿಷಯಗಳ ಕುರಿತ ತರಬೇತಿ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರಿಗೂ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಹಾಗೂ ಪ್ರಾಥಮಿಕ ಶಿಕ್ಷಕರ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಂಜುನಾಥ್, ಜಿಪಿಟಿ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ವಾರುತಿ ವ್ಯಾಗಳಮನಿ, ತಾಲೂಕು ನೋಡಲ್ ಅಧಿಕಾರಿ ಮಂಜುನಾಥ, ಎಪಿಎಫ್‌ನ ಶೋಭನಾ, ಸುಮಂಗಲಾ, ಬಿಆರ್‌ಪಿ ಹನುಮರೆಡ್ಡಿ, ಸಂಪನ್ಮೂಲ ವ್ಯಕ್ತಿಗಳಾದ ವೀರೇಶ ಮೇಟಿ, ಮರ್ದಾನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net