ಒಳಮೀಸಲಾತಿಗೆ ಆಗ್ರಹಿಸಿ ಸಂಚಾರ ತಡೆ

ಕುಷ್ಟಗಿಯಲ್ಲಿ ವಿವಿಧ ದಲಿತ ಸಂಟನೆಗಳ ನೇತೃತ್ವದಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕುಷ್ಟಗಿಯಲ್ಲಿ ವಿವಿಧ ದಲಿತ ಸಂಟನೆಗಳ ನೇತೃತ್ವದಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
Published on
ಕೊಪ್ಪಳ: ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಕಡೆಗಣಿಸಿ 56ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವುದನ್ನು ಖಂಡಿಸಿ ಭಾನುವಾರ ಜಿಲ್ಲೆಯ ಕುಷ್ಟಗಿಯಲ್ಲಿ ವಿವಿಧ ದಲಿತ ಸಂಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ವಾದಿಗ ಮಹಾಸಭಾ, ಅಲೆವಾರಿ ಹಾಗೂ ಸಮಗಾರ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಹೋರಾಟದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. 35ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಒಳ ಮೀಸಲಾತಿ ವಿಧೇಯಕಕ್ಕೆ ಅನು ಮೋದನೆ ಸಿಕ್ಕರೂ, ವಾ.16ರ ಸಚಿವ ಸಂಪುಟದ ತೀರ್ವಾನ ಸಾವಾಜಿಕ ನ್ಯಾಯಕ್ಕೆ ಎಸಗಿದ ದ್ರೋಹವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಸವಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಒಳ ಮೀಸಲಾತಿಗೆ ಅಡ್ಡಗಾಲಾಗಿ ನಿಂತಿದ್ದಾರೆ ಎಂದು ಆರೋಪಿಸಿದ ಹೋರಾಟಗಾರರು, ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಫೆ.27ರ ಆದೇಶವನ್ನು ಹಿಂಪಡೆ ಯಬೇಕು. ಶೇ. 56ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು. ಮತ್ತು ಅಲೆವಾರಿ ಸಮುದಾಯಗಳಿಗೆ ಶೇ.14ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಯಿತು. ಸರ್ಕಾರವು ಚುನಾವಣಾ ಪ್ರಣಾಳಿಕೆಯ ಭರವಸೆಯನ್ನು ಮರೆತಿದೆ. ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಜಾರಿಗೆ ಹಿಂಜರಿಯುತ್ತಿರುವುದು ಖಂಡನೀಯ. ವಾ.12ರಂದು ಬೆಂಗಳೂರಿನಲ್ಲಿ ವಾಡು ಇಲ್ಲವೇ ಮಡಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net