ಜನ ವಿರೋಧಿ ಮಸೂದೆ ಹಿಂಪಡೆಯಲಿ

ಅಖಿಲ ಭಾರತ ಮುಷ್ಕರ ಭಾಗವಾಗಿ ಕನಕಗಿರಿಯಲ್ಲಿ ಮಂಗಳವಾರ ಸಿಐಟಿಯು ಹಾಗೂ ಜೆಸಿಟಿಯುನಿಂದ ಪಂಜಿನ ಮೆರವಣಿಗೆ ನಡೆಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಪಾಮಣ್ಣ, ಪರಶುರಾಮ, ಶಿವಕುಮಾರ ಇತರರಿದ್ದರು.
ಅಖಿಲ ಭಾರತ ಮುಷ್ಕರ ಭಾಗವಾಗಿ ಕನಕಗಿರಿಯಲ್ಲಿ ಮಂಗಳವಾರ ಸಿಐಟಿಯು ಹಾಗೂ ಜೆಸಿಟಿಯುನಿಂದ ಪಂಜಿನ ಮೆರವಣಿಗೆ ನಡೆಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಪಾಮಣ್ಣ, ಪರಶುರಾಮ, ಶಿವಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು-ಜೆಸಿಟಿಯುನಿಂದ ಪಂಜಿನ ಮೆರವಣಿಗೆ
ಕನಕಗಿರಿ: ಅಖಿಲ ಭಾರತ ಮುಷ್ಕರ ಫೆ.12ರಂದು ನಡೆಯಲಿದ್ದು, ಇದರ ಭಾಗವಾಗಿ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಿಐಟಿಯು ಹಾಗೂ ಜೆಸಿಟಿಯುನಿಂದ ಪಂಜಿನ ಮೆರವಣಿಗೆ ನಡೆಯಿತು.
ಮೆರವಣಿಗೆ ಉದ್ದೇಶಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ಮಾತನಾಡಿ, 4 ಲೇಬರ್ ಕೋಡ್ ಹಿಂಪಡೆಯಬೇಕು. ವಿ.ಬಿ. ಜಿ ರಾಮ್ ಜಿ, ರೋಜಗಾರ್ ಯೋಜನೆ ರದ್ದುಗೊಳಿಸಿ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿಯನ್ನು ಮುಂದುವರಿಸಬೇಕು. 600 ರೂ. ಕೂಲಿ ದರ ನಿಗದಿ ಮಾಡಿ, 200ದಿನ ಮಾನವ ದಿನಗಳ ಸೃಜನೆ ಮಾಡಿ ವಿಮಾ ಕಾಯ್ದೆ ರದ್ದುಗೊಳಿಸಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ, ಭೂಸ್ವಾಧೀನ ಕಾಯೆ ಕೈ ಬಿಡಬೇಕು. ರಾಜ್ಯ ಸರ್ಕಾರ ಲೇಬರ್ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದು ಮತ್ತು ಎಲ್ಲ ಜನ ವಿರೋಧಿ ಮಸೂದೆ ಹಿಂಪಡೆಯಬೇಕು. ಕನಿಷ್ಠ ವೇತನ 41 ಸಾವಿರ ರೂ.ಗೆ ಪರಿಷ್ಕರಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆ ಮೇರೆಗೆ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಕಾರ್ಮಿಕರ-ರೈತರ ಮತ್ತು ಕೃಷಿ ಕೂಲಿಕಾರರು ಸ್ವಯಂಪ್ರೇರಿತ ಬಂದ್‌ಗೆ ಬೆಂಬಲಿಸಬೇಕು ಎಂದರು.
ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಪಾಮಣ್ಣ, ಪರಶುರಾಮ, ಶಿವಕುಮಾರ್, ನಿಂಗಪ್ಪ, ಮೌಲಾ ಹುಸೇನ್, ಹೊನ್ನೂರಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net