ಇಂದು ಗುರುಬಸವ ಭವನಕ್ಕೆ ಭೂಮಿ ಪೂಜೆ

ಕೊಪ್ಪಳದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಗುರುರಾಜ ಹಲಗೇರಿ ಮಾತನಾಡಿದರು, ಬಣಜಿಗ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ, ಬಣಜಿಗ ಸಮುದಾಯದ ತಾಲೂಕು ಮಹಿಳಾ ಘಟಕದ ಅಧ್ಯೆ ಅಪರ್ಣಾ ಬಳ್ಳೊಳ್ಳಿ,  ಬಣಜಿಗ ಸಮುದಾಯದ ಮಹಿಳಾ ನಗರ ಘಟಕದ ಅಧ್ಯೆ ಸುಧಾ ಇತರರಿದ್ದರು.
ಕೊಪ್ಪಳದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಗುರುರಾಜ ಹಲಗೇರಿ ಮಾತನಾಡಿದರು, ಬಣಜಿಗ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ, ಬಣಜಿಗ ಸಮುದಾಯದ ತಾಲೂಕು ಮಹಿಳಾ ಘಟಕದ ಅಧ್ಯೆ ಅಪರ್ಣಾ ಬಳ್ಳೊಳ್ಳಿ, ಬಣಜಿಗ ಸಮುದಾಯದ ಮಹಿಳಾ ನಗರ ಘಟಕದ ಅಧ್ಯೆ ಸುಧಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುರಾಜ ಹಲಿಗೇರ್​
ಕೊಪ್ಪಳ: ಕರ್ನಾಟಕ ರಾಜ್ಯ ಬಣಜಿಗ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಬಣಜಿಗ ಸಮುದಾಯದ ಸಂಸ್ಥಾಪನಾ ದಿನಾಚರಣೆ ಹಾಗೂ ಗುರುಬಸವ ಬಣಜಿಗರ ಭವನದ ಭೂಮಿ ಪೂಜೆ ಮತ್ತು ಅಡಿಗಲ್ಲು ಸಮಾರಂಭವನ್ನು ಫೆ. 13ರಂದು ನಗರದ ಬಳ್ಳೊಳ್ಳಿ ರೈಸ್​ ಮಿಲ್​ ಹಿಂಭಾಗವಿರುವ ಹಮಾಲರ ಕಾಲೋನಿ ಹತ್ತಿರದ ಬಣಜಿಗ ಸಮಾಜದ ನಿವೇಶನದಲ್ಲಿ ಬೆಳಗ್ಗೆ 9.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನಗರದಸಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಧ್ವಜಾರೋಹಣ ನೆರವೇರಿಸಲಿದ್ದು, ರಾಮದುರ್ಗ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್​ ಪಟ್ಟನ್​ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಭವನದ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ.
ಸಂಸದ ಕೆ. ರಾಜಶೇಖರ ಹಿಟ್ನಾಳ ಅವರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಹಾಗೂ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಮಲ್ಲಿಕಾರ್ಜುನ ಅಗಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿಸುವರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದು. ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಣಜಿಗ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ, ಬಣಜಿಗ ಸಮುದಾಯದ ತಾಲೂಕು ಮಹಿಳಾ ಘಟಕದ ಅಧ್ಯೆ ಅಪರ್ಣಾ ಬಳ್ಳೊಳ್ಳಿ, ಬಣಜಿಗ ಸಮುದಾಯದ ಮಹಿಳಾ ನಗರ ಘಟಕದ ಅಧ್ಯೆ ಸುಧಾ, ಶಾಂತೇಶ, ರಾಜು ವಾಲಿ, ಬಸವರಾಜ ಕಾಮಲಾಪೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net