ವಚನಗಾರ್ತಿಯರ ಸಂದೇಶಗಳಿಗೆ ಸರ್ವಕಾಲಿಕ ಮಾನ್ಯತೆ

ಗಂಗಾವತಿ ಹಿರೇಜಂತಕಲ್ ಶ್ರೀ ಮುಡ್ಡಾಣೇಶ್ವರ ದೇವಾಲಯದ ಶ್ರೀ ಗುರುಬಸವ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು  ಸನ್ಮಾನಿಸಲಾಯಿತು. ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಪ್ರೊ.ಜಗದೇವಿ ಕಲಶೆಟ್ಟಿ, ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ, ನೀಲಾಂಬಿಕೆ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಹೊಮ್ಮಿನಾಳ, ಪ್ರಮುಖರಾದ ಜಿ.ಉಮಾದೇವಿ ಶಿವಲಿಂಗಪ್ಪ, ಹಂಪಮ್ಮ ಪಾಲಾಕ್ಷಗೌಡ, ಚನ್ನಬಸಮ್ಮ ಕಂಪ್ಲಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಕ್ಕಮಹಾದೇವಿ
  • ಜಯಂತ್ಯುತ್ಸವ
  • ನಿವೃತ್ತ
ಗಂಗಾವತಿ: ಶರಣರ ತತ್ವಗಳನ್ನು ಪಾಲನೆ ಮಾಡುವುದರಿಂದ ಜೀವನ ಸುಂದರಗೊಳ್ಳುತ್ತದೆ ಎಂದು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಪ್ರೊ.ಜಗದೇವಿ ಕಲಶೆಟ್ಟಿ ಹೇಳಿದರು.
ನಗರದ ಹಿರೇಜಂತಕಲ್ ಶ್ರೀ ಮುಡ್ಡಾಣೇಶ್ವರ ದೇವಾಲಯದ ಶ್ರೀ ಗುರುಬಸವ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆ ಹಾಗೂ ನೀಲಾಂಬಿಕೆ ಮಹಿಳಾ ಮಂಡಳಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ದಾರ್ಶನಿಕರು ಮತ್ತು ವಚನಗಾರ್ತಿಯರ ಸಂದೇಶಗಳು ಸರ್ವಕಾಲಿಕ ಮಾನ್ಯತೆ ಪಡೆದಿವೆ ಎಂದರು.
ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಮಾತನಾಡಿ, ಅಕ್ಕಮಾಹಾದೇವಿಯ ತತ್ವ,
ಆದರ್ಶಗಳನ್ನು ಅಳವಡಿಸಿಕೊಂಡು, ಅರಗಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಹಿರೇಜಂತಕಲ್ ಅಕ್ಕಮಹಾದೇವಿ ದೇವಾಲಯದ ಸಂಸ್ಥಾಪಕಿ ಪಾರ್ವತೆಮ್ಮ ಆರಾಳ್ ಮತ್ತು ಬಿಜೆಪಿ ಧುರೀಣೆ ಸೌಭಾಗ್ಯ ಅವರನ್ನು ಸನ್ಮಾನಿಸಲಾಯಿತು. ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕಿ ಡಾ.ವಾಣಿಶ್ರೀ ಪಾಟೀಲ್, ನೀಲಾಂಬಿಕೆ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಹೊಮ್ಮಿನಾಳ, ಪ್ರಮುಖರಾದ ಜಿ.ಉಮಾದೇವಿ ಶಿವಲಿಂಗಪ್ಪ, ಹಂಪಮ್ಮ ಪಾಲಾಕ್ಷಗೌಡ, ಚನ್ನಬಸಮ್ಮ ಕಂಪ್ಲಿ, ಸುಮಿತ್ರಾ , ವಿಜಯಲಕ್ಷ್ಮೀ ನಾರಿನಾಳ, ಚೈತ್ರ ಗಬ್ಬೂರು, ಕವಿತಾ ರಗಡಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net