

ಪ್ರಮುಖ ಮುಖ್ಯಾಂಶಗಳು
ಮರಗಳ ತಾಯಿಯ ಹೆಸರಿಟ್ಟ ಪಾರ್ಕ್ ಹೀಗೆ ಸೊರಗುತ್ತಿರುವುದು ಜಿಲ್ಲೆಗೆ ಅವಮಾನ. ಇಲ್ಲಿ ಕೇವಲ ವಸೂಲಿ ನಡೆಯುತ್ತಿದೆ ಹೊರತು ಅಭಿವೃದ್ಧಿಯಲ್ಲ. ಪ್ರತಿದಿನ ಈ ಉಧ್ಯಾನವನದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಅನ್ನುವ ಗುಮಾನಿ ಸಹ ಕೇಳಿಬರುತ್ತಿದೆ, ಕಾಲೇಜು ವಿಧ್ಯಾರ್ಥಿ ಗಳಿಗೆ ನೆಚ್ಚಿನ ತಾಣವಾಗಿದೆ ಇವರ ಮೇಲೆ ನಿಗಾವಹಿಸಬೇಕು ಹಾಗೂ ತಕ್ಷಣ ಪೊಲೀಸರು ಗಸ್ತು ನಡೆಸಬೇಕು ಮತ್ತು ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು.
ಮಕ್ಕಳು ಮತ್ತು ಸಾರ್ವಜನಿಕರಿಗೆ ಅವಶ್ಯವಿರುವ ಆಟೋಪಕರಣಗಳು ಇಲ್ಲದಿರುವುದು ನನ್ನ ಗಮನಕ್ಕೆ ಇಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಯುನಿಫಾಮ್ರ್ ಮೇಲೆ ಬರಬೇಡಿ ಎಂದು ಹೇಳಲು ನಮಗೆ ಯಾವುದೇ ಡೈರೆಕ್ಷನ್ ಇಲ್ಲ. ಅಲ್ಲಿ ಸಂಗ್ರಹವಾಗುವ ಹಣದಿಂದ ಆದಷ್ಟು ನಿರ್ವಹಣೆ ಮಾಡುತ್ತಿದ್ದೇವೆ. ಈ ಎಲ್ಲಾ ಅಂಶಗಳನ್ನು ಮುಂದಿನ ಮ್ಯಾನೆಜ್ಮೆಂಟ್ ಕಮಿಟಿಯ ಸಭೆಯ ಗಮನಕ್ಕೆ ತರುತ್ತೇನೆ.