ಕೊಪ್ಪಳಕ್ಕೆ ಇವರು ಟಾಪರ್​

ಪವಿತ್ರಾ ಹುಲಗಪ್ಪ, ಅಭಿಷೇಕ ನಂದಿಹಾಳ, ಸೌಜನ್ಯ ಹಿಡ್ಕಲ್​,ಅನ್ವೀತಾ ರಟ್ಟಿಹಳ್ಳಿ, ತೇಜಶ್ವಿನಿ ಪಿ.
ಪವಿತ್ರಾ ಹುಲಗಪ್ಪ, ಅಭಿಷೇಕ ನಂದಿಹಾಳ, ಸೌಜನ್ಯ ಹಿಡ್ಕಲ್​,ಅನ್ವೀತಾ ರಟ್ಟಿಹಳ್ಳಿ, ತೇಜಶ್ವಿನಿ ಪಿ.
Published on

ಪ್ರಮುಖ ಮುಖ್ಯಾಂಶಗಳು

  • ದ್ವೀತಿಯ ಪಿಯು ಲಿತಾಂಶ
  • 14 ಮಕ್ಕಳು ಕೊಪ್ಪಳ ಟಾಪರ್ಸ್​
ಕೊಪ್ಪಳ: ಕಲಾ ವಿಭಾಗದಲ್ಲಿ ನವಲಿ ಸರ್ಕಾರಿ ಪಿಯು ಕಾಲೇಜಿನ ಪವಿತ್ರಾ ಹುಲಗಪ್ಪ, ಕುಷ್ಟಗಿ ಆರಾಳಗೌಡ ಪಿಯು ಕಾಲೇಜಿನ ಅಭಿಷೇಕ ನಂದಿಹಾಳ ತಲಾ 584 ಅಂಕ (ಪ್ರಥಮ), ಕುಷ್ಟಗಿ ಸರ್ಕಾರಿ ಪಿಯು ಕಾಲೇಜಿನ ಶರಣಮ್ಮ ಗಡ್ಡಿ, ಕೊಪ್ಪಳ ಗವಿಸಿದ್ದೇಶ್ವರ ಪಿಯು ಕಾಲೇಜಿನ ಸೌಜನ್ಯ ಹಿಡ್ಕಲ್​ ತಲಾ 582 ಅಂಕಗಳು (ದ್ವೀತಿಯ) ಹಾಗೂ ಇರಕಲ್​ಗಡಾ ಸರ್ಕಾರಿ ಪಿಯು ಕಾಲೇಜಿನ ನಂದಿತಾ ಮೇಟಿ 581 ಅಂಕ(ತೃತೀಯ) ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶ್ರೀರಾಮನಗರ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನ ವಂದನಾ ಜೈನ್​, ವಡ್ಡರಟ್ಟಿಯ ಕಿಷ್ಕಿಂಧಾ ಪಿಯು ಕಾಲೇಜು ಅನ್ವಿತಾ ರಟ್ಟಿಹಳ್ಳಿ, ವಿದ್ಯಾನಗರದ ಶ್ರೀಮತಿ ಜನತಾರಾಣಿ ಪಿಯು ಕಾಲೇಜಿನ ಜಿ.ವಿದ್ಯಾ ತಲಾ 594 ಅಂಕ(ಪ್ರಥಮ), ಶ್ರೀರಾಮನಗರ ವಿದ್ಯಾನಿಕೇತನ ಪಿಯು ಕಾಲೇಜಿನ ದೀಪಿಕಾ ಐಲಿ, ಮರ್ಲಾಲನಹಳ್ಳಿಯ ರೆಡ್ಡೀವಿರಣ್ಣ ಪಿಯು ಕಾಲೇಜಿನ ಪಿ.ತೇಜಸ್ವಿನಿ ತಲಾ 593 ಅಂಕ (ದ್ವೀತಿಯ), ಶ್ರೀಮತಿ ಜನತಾರಾಣಿ ಪಿಯು ಕಾಲೇಜಿನ ಸೌಮ್ಯಾ ಭಂಡಾರಿ 592 ಅಂಕ (ತೃತೀಯ) ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶ್ರೀರಾಮನಗರ ವಿದ್ಯಾನಿಕೇತನ ಪಿಯು ಕಾಲೇಜಿನ ಯು.ಶ್ರಾವಣಿ 598 (ಪ್ರಥಮ), ಅರ್ಜುನ್​ ಗ್ವಾತಗಿ 597 (ದ್ವೀತಿಯ), ವೈಷ್ಣವಿ 595 (ತೃತೀಯ) ಸ್ಥಾನ ಪಡೆವ ಮೂಲಕ ವಿಜ್ಞಾನ ವಿಭಾಗದಲ್ಲಿ ಸಾಧನೆ ಮೆರೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net