ಜನ ಸೇವೆಗಿಂತ ದೊಡ್ಡ ಕೆಲಸ ಇಲ್ಲ

ಕೊಪ್ಪಳದಲ್ಲಿ ಕೈಗಾರಿಕೆಗಳ ವಿರುದ್ಧ ಧರಣಿಯಲ್ಲಿ ಬುಧವಾರ ವಿಪ ಸದಸ್ಯ ಎಚ್​.ವಿಶ್ವನಾಥ ಮಾತನಾಡಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಸರೋಜಾ ಬಾಕಳೆ ಇದ್ದರು.
ಕೊಪ್ಪಳದಲ್ಲಿ ಕೈಗಾರಿಕೆಗಳ ವಿರುದ್ಧ ಧರಣಿಯಲ್ಲಿ ಬುಧವಾರ ವಿಪ ಸದಸ್ಯ ಎಚ್​.ವಿಶ್ವನಾಥ ಮಾತನಾಡಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಸರೋಜಾ ಬಾಕಳೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಎಚ್​.ವಿಶ್ವನಾಥ ಹೇಳಿಕೆ
ಕೊಪ್ಪಳ : ಕೊಪ್ಪಳದಲ್ಲಿ ಬಿಎಸ್​ಪಿಎಲ್​ ಕಾರ್ಖಾನೆ ಆಗಲು ಬಿಡಬಾರದು. ಸಿಎಂ ಸಿದ್ದರಾಮಯ್ಯಗೆ ಜನ ಸೇವೆಗಿಂತ ಬೇರೆ ಕೆಲಸ ಏನಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಚ್​.ವಿಶ್ವನಾಥ ಪ್ರಶ್ನಿಸಿದರು.
ನಗರದ ನಗರಸಭೆ ಮುಂಭಾಗದಲ್ಲಿ ಬಿಎಸ್​ಪಿಎಲ್​ ಸೇರಿ ಇತರ ಕಾರ್ಖಾನೆಗಳ ವಿಸ್ತರಣೆ ಖಂಡಿ ಜಂಟಿ ಕ್ರಿಯಾ ಸಮಿತಿ ಸದಸ್ಯರು ನಡೆಸುತ್ತಿರುವ 167ನೇ ದಿನದ ಧರಣಿಯಲ್ಲಿ ಬುಧವಾರ ಭಾಗಿಯಾಗಿ ಮಾತನಾಡಿದರು.
ಕೈಗಾರಿಕೆಗಳ ವಿಸ್ತರಣೆ ಮುಂದುವರೆದರೆ ಈ ಭಾಗ ಸ್ಮಶಾನ ಆಗಲಿದೆ. ಜನಪ್ರತಿನಿಧಿಗಳೂ ಬಾಂಬೆ ಸೇರಬೇಕಾಗುತ್ತದೆ. 167 ದಿನ ಸುದೀರ್ ಹೋರಾಟ ಮಾಡುವುದು ಸುಲಭದ ಕೆಲಸವಲ್ಲ. ಸಚಿವ ಶಿವರಾಜ ತಂಗಡಗಿ, ಉಳಿದ ಶಾಸಕರು ತೀವ್ರ ಸ್ಪಂದನೆ ತೋರಬೇಕು. ಎಲ್ಲದಕ್ಕಿಂತ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಇಲ್ಲದಿದ್ದರೆ ಬೇರೇನು ಮಾಡಲು ಸಾಧ್ಯ ? ಯುವಕರು, ಸಂ&ಸಂಸ್ಥೆಗಳು ಹೋರಾಟಕ್ಕೆ ಹೆಚ್ಚಿನ ಬಲ ನೀಡಬೇಕು ಎಂದರು.
ಕೆರೆ ಸಂರಕ್ಷಣೆಗೆ ಸವೋರ್ಚ್ಛ ನ್ಯಾಯಾಲಯ ಆದೇಶಿಸಿದೆ. ಆದರೆ, ಕೊಪ್ಪಳದಲ್ಲಿ ಜಿಲ್ಲಾಧಿಕಾರಿಗಳೇ ಕಾರ್ಖಾನೆಗೆ ಕೆರೆಯನ್ನು ಮಾರಾಟ ಮಾಡಿದ್ದಾರೆ. ಕೂಡಲೇ ಕೇಸ್​ ದಾಖಲಿಸಿ ಕಾನೂನು ಹೋರಾಟ ಮಾಡಿ. ವಿಪಕ್ಷದವು ಏನು ಮಾಡುತ್ತಿದ್ದಾರೆ ? ವಿಪಕ್ಷ ನಾಯಕ ಆರ್​.ಅಶೋಕ ಅವರಿಗೆ ಇದಕ್ಕಿಂತ ದೊಡ್ಡ ವಿಷಯ ಬೇಕಾ ? ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಘೋಷಿಸಿದರು.
ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಸಚಿವ, ಸಂಸದ, ಶಾಸಕರು ಇತ್ತ ಗಮನ ನೀಡುತ್ತಿಲ್ಲ. ಗವಿಶ್ರೀಗಳು ಹೇಳಿದಂತೆ ಸರ್ಕಾರವೇ ಅನುಮತಿ ನೀಡಿದೆ. ಅವರೇ ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದರೂ ಸ್ಪಂದಿಸುತ್ತಿಲ್ಲ. ಕೂಡಲೇ ಸರ್ವಪಕ್ಷ ನಿಯೋಗ ಕೊಂಡೊಯ್ದು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಸರೋಜಾ ಬಾಕಳೆ, ಕಾವ್ಯಾ ಗಡಾದ, ಪ್ರಕಾಶ ಹಾದಿಮನಿ, ಬಿ.ಬಿ ಪಾಟೀಲ್​, ಎಚ್​.ವೈ ಕಮ್ಮಾರ, ಎನ್​. ವಿ ಹಾಳಕೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net