ದೇವರ ಸ್ಮರಣೆಯಿಂದ ಜಗತ್ತು ಸುಂದರ

ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇವರ ಸ್ಮರಣೆ

ದೇವರ ಸ್ಮರಣೆಯಿಂದ ಜಗತ್ತು ಸುಂದರ

ಅಳವಂಡಿ: ಕೈಯಲ್ಲಿ ಒಳ್ಳೆಯ ಕಾಯಕ, ತಲೆಯಲ್ಲಿ ಒಳ್ಳೆಯ ವಿಚಾರ, ಹೃದಯದಲ್ಲಿ ದೇವ ನಾಮ ಸ್ಮರಣೆ ಮಾಡಿದರೆ ಜಗತ್ತು ಸುಂದರವಾಗಿರುತ್ತದೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾದೇವಿ ಜಾತ್ರೋತ್ಸವದ ನಿಮಿತ್ತ ರಥೋತ್ಸವಕ್ಕೂ ಮುಂಚೆ ಬುಧವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬರೂ ಪರಿಶ್ರಮದ ಬದುಕು ಅಳವಡಿಸಿಕೊಳ್ಳಿ.
ಸಂತರು, ಶರಣರು, ಮಹಾತ್ಮರು ಹಾಗೂ ದೇವರ ನಾಮ ಸ್ಮರಣೆಯಿಂದ ಮನಸ್ಸು ಸಂತೋಷವಾಗಿ ಒಗ್ಗಟ್ಟಿನ ಭಾವ ಮೂಡಲಿದೆ ಎಂದರು.
ಹೂವಿನಹಡಗಲಿಯ ಡಾ.ಹಿರಿಶಾಂತವೀರ ಸ್ವಾಮೀಜಿ, ಅಳವಂಡಿಯ ಶ್ರೀ ಮರುಳಾರಾದ್ಯ ಶಿವಾಚಾರ್ಯರು, ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ, ಬಿಸರಳ್ಳಿಯ ಶ್ರೀ ಶಿವಶಾಂತವೀರ ಸ್ವಾಮೀಜಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net