ಶ್ರಮಿಕ ವರ್ಗದಿಂದಲೇ ಭೂಮಿ ಉಳಿವು ಸಾಧ್ಯ

ಗಿಣಿಗೇರಾ ಕೆರೆ ದಡದಲ್ಲಿ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿದರು. ವಾಸುದೇವಮೂರ್ತಿ, ಮಂಜುಳಾದೇವಿ ಹೂಗಾರ, ಮಹೇಶ್​, ಸೌಮ್ಯ.ಕೆ, ಶ್ರೀನಿವಾಸ ಚಿತ್ರಗಾರ, ದೇವರಾಜ ಪತ್ತಾರ, ನಾಗರಾಜ ಚಳ್ಳೋಳ್ಳಿ ಇದ್ದರು.
ಗಿಣಿಗೇರಾ ಕೆರೆ ದಡದಲ್ಲಿ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿದರು. ವಾಸುದೇವಮೂರ್ತಿ, ಮಂಜುಳಾದೇವಿ ಹೂಗಾರ, ಮಹೇಶ್​, ಸೌಮ್ಯ.ಕೆ, ಶ್ರೀನಿವಾಸ ಚಿತ್ರಗಾರ, ದೇವರಾಜ ಪತ್ತಾರ, ನಾಗರಾಜ ಚಳ್ಳೋಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಂತೇಶ್​ ದರಗದ ಅಭಿಪ್ರಾಯ
  • ವಿಶ್ವ ಭೂ ದಿನಾಚರಣೆ
ಕೊಪ್ಪಳ : ಕೈ ಕೆಸರು ಮಾಡಿಕೊಂಡು ದುಡಿಯುವ ವರ್ಗದವರಿಂದ ಮಾತ್ರ ಭೂಮಿಯ ಉಳಿವು ಸಾಧ್ಯವೆಂದು ಕೊಪ್ಪಳದ ಹಿರಿಯ ಸಿವಿಲ್​ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್​ ಎಸ್​. ದರಗದ ಹೇಳಿದರು.
ತಾಲೂಕಿನ ಗಿಣಿಗೇರಿ ಗ್ರಾಮದ ಕೆರೆಯಲ್ಲಿ ನರೆಗಾ ಯೋಜನೆಯಡಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿಯ ಉಳಿವಿನಿಂದ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ಭೂಮಿಯನ್ನು ನಾವು ತಾಯಿಯ ಸ್ವರೂಪದಲ್ಲಿ ಕಾಣುತ್ತೇವೆ. ನಮ್ಮೇಲ್ಲರನ್ನು ಪೋಷಣೆ ಮಾಡುವವಳು ಭೂ ತಾಯಿ. ಅತಿಯಾದ ನಗರೀಕರಣದಿಂದ ಭೂ ರಕ್ಷಣೆ ಕಷ್ಟಸಾಧ್ಯವಾಗಿದೆ. ಇದರಲ್ಲಿ ಶ್ರಮಿಕ ವರ್ಗದವರು ಭೂಮಿಯನ್ನು ಉಳಿವಿಕೆ ಪ್ರಮುಖ ಪ್ರಾಧಾನ್ಯತೆ ನೀಡುತ್ತಾರೆ. ಪ್ರಜ್ಞಾವಂತರಾದ ನಾವುಗಳು ಭೂಮಿಯ ರಕ್ಷಣೆ, ಪೋಷಣೆ ಮಾಡಲು ಕಾರ್ಯನಿರತರಾಗಬೇಕು. ಹಿಂದಿನಿಂದಲೂ ಗ್ರಾಮೀಣ ಭಾಗದಲ್ಲಿ ಹಿರಿಯ ಭೂಮಿಗೆ ಅತಿ ಹೆಚ್ಚು ಒತ್ತು ನೀಡಿ ಭೂಮಿ ಉಳಿಸಿರುವದರಿಂದ ಇಂದು ನಾವು ನೀವುಗಳು ಸುಖಕರವಾಗಿ ಬದುಕುತ್ತಿದ್ದೇವೆ ಎಂದರು.
ಜಿಲ್ಲಾ ಎಫ್​ಇಎಸ್​ ಸಂಸ್ಥೆಯ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ, ಮಣ್ಣಿನಿಂದ ನಮಗೆ ಸಸ್ಯ ಸಂಪತ್ತು, ಜಲಸಂಪತ್ತು, ಖನಿಜ ಸಂಪತ್ತು ಹೀಗೆ ಮುಂತಾದ ಲಾಭವಿದೆ. ಭೂಮಿಯನ್ನು ಬಳಸಿ, ಉಳಿಸಿಕೊಂಡು ಹೋಗುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಪ್ರತಿ ಮನೆ ಮುಂದೆ ಒಂದು ಮರ ನೆಡುವದು, ಜಾನುವಾರು ಸಾಕಾಣಿಕೆ ಬಗ್ಗೆ ಗಮನಹರಿಸಬೇಕೆಂದರು.
ಗಿಣಿಗೇರಾ ಗ್ರಾಂಪಂ ಪಿಡಿಓ ಮಂಜುಳಾದೇವಿ ಹೂಗಾರ ಮಾತನಾಡಿ, ರೈತರು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಮಲಗುವವರೆಗೆ ಭೂಮಿಯ ಪ್ರತಿ ಚಟುವಟಿಕೆಯಲ್ಲಿ ನಿರತರಾಗಿರುದ್ದಾರೆ. ಅವರು ಭೂಮಿಗೆ ನೀಡಿರುವ ಪ್ರಾಮುಖ್ಯತೆಯಂತೆ ನಾವುಗಳು ಕೂಡಾ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಪಂಚಾಯತ್​ ರಾಜ್​ ಸಹಾಯಕ ನಿರ್ದೇಶಕ ಮಹೇಶ್​, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ.ಕೆ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ನಾಗರಾಜ ಚಳ್ಳೋಳ್ಳಿ, ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ಅನಿಲ್​ ಜಾನಾ, ಪ್ರಮುಖರಾದ ಹನಮೇಶ ನಾಯಕ, ಗುರಪ್ಪ ಗುಡೇಕಾರ್​, ಹೊನ್ನೂರಸಾಬ ಹೊಸಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net