ತೊಗರಿ ಬೆಳೆಗೆ ಲಘು ಪೋಷಕಾಂಶ ಅಗತ್ಯ

ಬನ್ನಿಕೊಪ್ಪ ಗ್ರಾಮದ ತೊಗರಿ ಹೊಲದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಬ್ಯಾಟರಿ ಚಾಲಿತ ಯಂತ್ರದ ಮೂಲಕ ಕುಡಿ ಚಿವುಟುವಿಕೆಯ ಪ್ರಾತ್ಯಕ್ಷಿಕೆ ವೇಳೆ ಕೇಂದ್ರದ ಮುಖ್ಯಸ್ಥ ಡಾ.ಬದರಿ ಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ವೆಂಕರಡ್ಡಿ ವೆಂಕಟಾಪುರ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ರೈತರಾದ ಸಿದ್ದಪ್ಪ ಮಾಳೆಕೊಪ್ಪ, ಕಾಳಪ್ಪ ಡಂಬಳ ಇತರರಿದ್ದರು.

Published on

ಕುಕನೂರು: ತೊಗರಿ ಬೆಳೆಗೆ ಲಘು ಪೋಷಕಾಂಶ ಅಗತ್ಯವಿದ್ದು, ಬ್ಯಾಟರಿ ಚಾಲಿತ ಯಂತ್ರದ ಮೂಲಕ ಕುಡಿ ಚಿವುಟುವಿಕೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬದರಿ ಪ್ರಸಾದ್ ಹೇಳಿದರು. 

ಬನ್ನಿಕೊಪ್ಪ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಬ್ಯಾಟರಿ ಚಾಲಿತ ಯಂತ್ರದ ಮೂಲಕ ತೊಗರಿ ಬೆಳೆಯಲ್ಲಿ ಕುಡಿ ಚಿವುಟುವಿಕೆಯ ಪ್ರಾತ್ಯಕ್ಷಿಕೆಯಲ್ಲಿ ಮಂಗಳವಾರ ಮಾತನಾಡಿದರು. 
ತೊಗರಿಯಲ್ಲಿ ಹೂ ಹಿಡಿಯಲು ಹಾಗೂ ಹೂ ಉದುರುವುದನ್ನು ತಡೆಯಲು ನಾಪ್ತಾಲೀನ್ ಅಸಿಟಿಕ್ ಆ್ಯಸಿಡ್ ಹಾರ್ಮೋನ್‌ನನ್ನು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬಹುದು. ಇಳುವರಿ ಹೆಚ್ಚಳಕ್ಕಾಗಿ ಹೂ ಬಿಡುವ ಹಂತದಲ್ಲಿ ಪಲ್ಸ್ ಮ್ಯಾಜಿಕ್ ಅನ್ನು ಎಕರೆಗೆ ಎರಡು ಗ್ರಾಂ ಹಾಗೂ ಅದಕ್ಕೆ ಒಂದು ಹೋಳು ನಿಂಬೆ ಹಣ್ಣಿನ ರಸ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು. 
ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ವೆಂಕರಡ್ಡಿ ವೆಂಕಟಾಪುರ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ವಾಮನಮೂರ್ತಿ, ಪ್ರಗತಿಪರ ರೈತರಾದ ಸಿದ್ದಪ್ಪ ಮಾಳೆಕೊಪ್ಪ, ಕಾಳಪ್ಪ ಡಂಬಳ, ವೀರಪ್ಪ ಗೊಂದಿ, ಸಲಬಪ್ಪ ಗೊಂದಿ, ನಾಗರಾಜ ಹಳ್ಳಿಕೇರಿ, ಈಶಪ್ಪ ಬ್ಯಾಳಿ, ಪರಶುರಾಮ ವಜ್ರಬಂಡಿ, ಮರಿತಿಮ್ಮಪ್ಪ ದೇವರರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net