ಜನಮನ್ನಣೆ ಗಳಿಸಿದ ಸಿದ್ಧರಾಮಾನಂದ ಸ್ವಾಮೀಜಿ

ಕಾಗಿನೆಲೆ ಕಲಬುರಗಿ ವಿಭಾಗೀಯ ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಲಿಂಗೈಕ್ಯ ನಿಮಿತ್ತ ಗಂಗಾವತಿ ತಾಲೂಕಿನ ಬಸಾಪಟ್ಟಣದ ಶ್ರೀ ನಂಜುಂಡೇಶ್ವರ ಗುರುವಿನ್ ಮಠದಲ್ಲಿ ಹಾಲುಮತ ಸಮಾಜದಿಂದ ಶ್ರದ್ಧಾಂಜಲಿ ಸಭೆ ಗುರುವಾರ ನಡೆಯಿತು. ನಂಜುಂಡೇಶ್ವರ ಮಠದ ಪೀಠಾಧಿಪತಿಗಳಾದ ಸಿದ್ದಯ್ಯ ಗುರುವಿನ್, ಸಿದ್ಧರಾಮಯ್ಯ ಗುರುವಿನ್, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್ ಇತರರಿದ್ದರು.

Published on
ಗಂಗಾವತಿ: ಕಾಗಿನೆಲೆ ಕಲಬುರಗಿ ವಿಭಾಗೀಯ ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಲಿಂಗೈಕ್ಯ ನಿಮಿತ್ತ ತಾಲೂಕಿನ ಬಸಾಪಟ್ಟಣದ ಶ್ರೀ ನಂಜುಂಡೇಶ್ವರ ಗುರುವಿನ್ ಮಠದಲ್ಲಿ ಹಾಲುಮತ ಸಮಾಜದಿಂದ ಶ್ರದ್ಧಾಂಜಲಿ ಸಭೆ ಗುರುವಾರ ನಡೆಯಿತು.
ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್ ಮಾತನಾಡಿ, ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಶ್ರೀಗಳು. ಸಮಾಜಮುಖಿ ಚಟುವಟಿಕೆಗಳ ಮೂಲಕ ಜನ ಮನ್ನಣೆ ಗಳಿಸಿದ್ದರು ಎಂದರು.  ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂಜುಂಡೇಶ್ವರ ಮಠದ ಪೀಠಾಧಿಪತಿಗಳಾದ ಸಿದ್ದಯ್ಯ ಗುರುವಿನ್, ಸಿದ್ಧರಾಮಯ್ಯ ಗುರುವಿನ್ ಮಾತನಾಡಿದರು. 
ಸಮಾಜದ ಮುಖಂಡರಾದ ವಿ.ಸಣ್ಣಪ್ಪ, ನಿಂಗಪ್ಪ ಗುಂಡೂರು, ಕಲಕೇರಿ ಹನುಮಂತಪ್ಪ, ಬಸವರಾಜ್ ಕನಕಗಿರಿ, ಮಲ್ಲಪ್ಪ, ಕಣಿಮೇಶ, ಕರಡಿ ರಮೇಶ, ಬೆಟ್ಟಪ್ಪ ಗೋಡಿನಾಳ, ನಿಂಗಪ್ಪ ನಾಗಲಾಪುರ, ನಾಗರಾಜ ಇತರರಿದ್ದರು.
ಎಚ್‌ಆರ್‌ಜಿ ನಿವಾಸ: ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ನಗರದ ಎಚ್‌ಆರ್‌ಜಿ ನಿವಾಸದ ಆವರಣದಲ್ಲಿ  ವಿವಿಧ ಸಮಾಜದಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಮೌನಾಚರಣೆ ನಡೆಸಿದ ಮುಖಂಡರು, ಶ್ರೀಗಳ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ವಿವಿಧ ಸಮಾಜದ ಮುಖಂಡರಾದ ಭುವನೇಶಪ್ಪ, ವೀರನಗೌಡ, ಹನುಮಂತರಾಯ, ಅಯೂಬ್‌ಖಾನ್, ಶಂಕರ ಈಡಿಗ, ನಾಜನೀನ್, ಈ.ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net