ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಊಟೋಪಚಾರಕ್ಕೆ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲಾಗಿತ್ತು. ಪ್ರಚಾರಕ್ಕಾಗಿ ಎಲ್ಲೆಡೆ ಬ್ಯಾನರ್, ಬಸ್ಸುಗಳಿಗೆ ಉತ್ಸವದ ಸ್ಟಿಕ್ಕರ್ ಸಹ ಅಂಟಿಸಲಾಗಿತ್ತು. ಆದರೆ, ಆಡಳಿತಾತ್ಮಕ ಕಾರಣದಿಂದ ಏಕಾಏಕಿ ಜೂ.10, 11ಕ್ಕೆ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.