ಅಭಿವೃದ್ಧಿಯಲ್ಲಿ ಸ್ತ್ರೀಯರ ಪಾತ್ರ ಪ್ರಮುಖ

ಹನುಮಸಾಗರದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜಿ. ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ತಾಲೂಕು ಯೋಜನಾಧಿಕಾರಿ ನಿರಂಜನ್ ಎಂ.ಆರ್., ನಿವೃತ್ತ ಮುಖ್ಯಶಿಕ್ಷಕಿ ಪ್ರಭಾ ಪಂಥ್, ಸಹಶಿಕ್ಷಕಿ ಲೀಲಾ ಶೆಟ್ಟರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ವಿ.ಹಿರೇಮಠ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹನುಮಸಾಗರ ಮಹಿಳಾ ವಿಚಾರಗೋಷ್ಠಿ
  • ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜಿ. ಹೇಳಿಕೆ
ಹನುಮಸಾಗರ: ಮಹಿಳೆಯರಿಗೆ ವ್ಯವಹಾರ ಜ್ಞಾನ ನೀಡುವ ಅನೇಕ ಯೋಜನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿದೆ ಎಂದು ಯೋಜನೆಯ ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜಿ. ಹೇಳಿದರು.
ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೇ ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುನ್ನಲೆಗೆ ಬರಬೇಕಾಗಿದೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಗೆ ವ್ಯವಹಾರ ಜ್ಞಾನ ನೀಡಿದರೆ ಎಲ್ಲ ಕ್ಷೇತ್ರಗಳಲ್ಲಿ ಮುಂದುಬರಲು ಸಾಧ್ಯ. ಮಹಿಳೆಯರು ಸ್ವಯಂ ಉದ್ಯೋಗಿಗಳಾಗಬೇಕು. ಪ್ರತಿಯೊಬ್ಬರಿಗೂ ಒಂದು ಕನಸು ಇರುತ್ತದೆ. ಆ ಕನಸು ನನಸಾಗಿಸಲು ನಮ್ಮ ಯೋಜನೆ ಸಹಕಾರಿಯಾಗಿದ್ದು, ಅನೇಕ ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ರಂಗೋಲಿ, ಪೌಷ್ಟಿಕ ಆಹಾರ ತಯಾರಿ, ಪುಷ್ಪಗುಚ್ಛ ತಯಾರಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ತಾಲೂಕು ಯೋಜನಾಧಿಕಾರಿ ನಿರಂಜನ್ ಎಂ.ಆರ್, ನಿವೃತ್ತ ಮುಖ್ಯಶಿಕ್ಷಕಿ ಪ್ರಭಾ ಪಂಥ್, ಸಹಶಿಕ್ಷಕಿ ಲೀಲಾ ಶೆಟ್ಟರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ವಿ.ಹಿರೇಮಠ, ಸಮನ್ವಯಾಧಿಕಾರಿ ನಂದಾ, ರೂಪಾ, ಮಂಜುಳಾ ಭೋವಿ, ಅಬೂಬಕರ್ ಸುನಿತಾ ಕೊಮಾರಿ, ಬಸಮ್ಮ ಹಿರೇಮಠ, ಶ್ರೀದೇವಿ ಹಿರೇಮಠ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು, ಸಂಯೋಜಕಿಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net