ಗಡಿಭಾಗದ ರಸ್ತೆ ಸಂಪೂರ್ಣ ಹಾಳು

ಕನಕಗಿರಿ ತಾಲೂಕಿನ ಮುಸಲಾಪುರದ ಬಳಿ ಸಂಪೂರ್ಣವಾಗಿ ಹಾಳಾಗಿ ಗುಂಡಿ ಬಿದ್ದಿರುವ ರಸ್ತೆ.
ಕನಕಗಿರಿ ತಾಲೂಕಿನ ಮುಸಲಾಪುರದ ಬಳಿ ಸಂಪೂರ್ಣವಾಗಿ ಹಾಳಾಗಿ ಗುಂಡಿ ಬಿದ್ದಿರುವ ರಸ್ತೆ.
Published on

ಪ್ರಮುಖ ಮುಖ್ಯಾಂಶಗಳು

  • ಮುಸಲಾಪುರನಲ್ಲಿ ಸಂಚರಿಸಲು ಪರದಾಟ
ಕನಕಗಿರಿ: ತಾಲೂಕಿನ ಮುಸಲಾಪುರದಿಂದ ಕೊಪ್ಪಳ ತಾಲೂಕಿನ ಹಾಸಗಲ್‌ವರೆಗಿನ 4 ಕಿ.ಮೀ ರಸ್ತೆಯ ಪೈಕಿ ಮುಕ್ಕಾಲು ಕಿ.ಮೀ ರಸ್ತೆಯೂ ಸಂಪೂರ್ಣವಾಗಿ ಹಾಳಾಗಿದ್ದು, ಸವಾರರು ಪರದಾಡುತ್ತಿದ್ದಾರೆ. ತೇಪೆ ಹಾಕಲಿಕ್ಕೂ ಸರ್ಕಾರದಲ್ಲಿ ಅನುದಾನವಿಲ್ಲವೇ ಎನ್ನುವ ಪ್ರಶ್ನೆ ಸವಾರರನ್ನು ಕಾಡತೊಡಗಿದೆ.
ಕೆಲ ವರ್ಷಗಳ ಹಿಂದೆಯೇ ಕನಕಗಿರಿ ತಾಲೂಕು ಮುಸಲಾಪುರದಿಂದ ಕೊಪ್ಪಳ ತಾಲೂಕಿನ ಹೊಸೂರು ಕ್ರಾಸ್ (ಎನ್‌ಎಚ್)ವರೆಗೆ ರಸ್ತೆ ಹದಗೆಟ್ಟಿದೆ. ಅದರಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಮುಕ್ಕಾಲು ಕಿ.ಮೀ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದ ಸವಾರರು ಮುಸಲಾಪುರ-ಹಾಸಗಲ್ ನಡುವಿನ 4 ಕಿ.ಮೀ ರಸ್ತೆಯಲ್ಲಿ ಸಾಗದೇ ಗಂಗನಾಳ ಗ್ರಾಮದ ಮಾರ್ಗವಾಗಿ ಸುತ್ತುವರೆದು ಹಾಸಗಲ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರ ಕೊಪ್ಪಳ ಹಾಗೂ ನೆರೆಯ ವಿಜಯನಗರ (ಹೊಸಪೇಟೆ) ಮೂಲಕ ಅನ್ಯ ಕಡೆಗೆ ತೆರಳುವವರು, ಈ ರಸ್ತೆಯನ್ನು ಅತೀ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಆದರೆ, ಸುತ್ತುವರೆದು ಸಾಗಬೇಕಾದರೆ ಅವರ ಸಮಯ ಹಾಗೂ ಖರ್ಚು ಹೆಚ್ಚಾಗುತ್ತದೆ.
ಅನಿವಾರ್ಯವಾಗಿ ಕಾರು ಸೇರಿ ಇತರೇ ದೊಡ್ಡ ವಾಹನಗಳು ಮುಸಲಾಪುರದಿಂದ ಗಂಗನಾಳ ಮೂಲಕ ಹಾಸಗಲ್ ತೆರಳಲು ಮುಂದಾದರೆ ಅತೀ ಹೆಚ್ಚು ವಾಹನಗಳ ಸಂಚಾರದಿಂದ (ಗಂಗನಾಳ- ಹಾಸಗಲ್) ರಸ್ತೆಯೂ ಹದಗೆಟ್ಟಿದೆ. ದ್ವಿ ಚಕ್ರ ಸವಾರರು ಮುಸಲಾಪುರದಿಂದ ಕೊಪ್ಪಳದ ಗಡಿ ಭಾಗದ ಉತ್ತಮ ರಸ್ತೆಗೆ ತಲುಪುವವರೆಗೆ ಸವಾರರ ಗುಂಡಿಗೆ ಗಟ್ಟಿಯಾಗಿ ಹಿಡಿದು ಚಾಲನೆ ಮಾಡಬೇಕಿದೆ.
"

ಜಿಲ್ಲಾ ಹೆದ್ದಾರಿಯಾಗಿದ್ದ ರಸ್ತೆಯೂ ಇದೀಗ ರಾಜ್ಯ ಹೆದ್ದಾರಿಯಾಗಿದೆ. ಗಡಿಭಾಗದಲ್ಲಿ ರಸ್ತೆಯೂ ಸಂಪೂರ್ಣವಾಗಿ ಹಾಳಾಗಿರುವುದು ಗಮನಕ್ಕಿದೆ. ತೇಪೆ ಹಾಕಲಾಗುವುದಿಲ್ಲ. ಬದಲಾಗಿ ಹೊಸ ರಸ್ತೆಯನ್ನೇ ನಿರ್ಮಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಿ ನಿರ್ಮಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net