ಕಾಲ್ಪನಿಕವಲ್ಲ ಮಹರ್ ಸಮಾಜದ ಸತ್ಯಕತೆ

ಗಂಗಾವತಿ ಆಟೋನಗರದ ಕ್ರಾಂತಿ ಚಕ್ರ ಬಳದ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಶುಕ್ರವಾರ ಆಚರಿಸಲಾಯಿತು. ಬಳಗದ ಅಧ್ಯಕ್ಷ ಜೆ.ಭಾರದ್ವಾಜ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಪರಶುರಾಮ್, ಕೇಶವನಾಯ್ಕ, ಚಾಂದ್‌ಪಾಷಾ ಇತರರಿದ್ದರು.

Published on
ಗಂಗಾವತಿ: ಇಲ್ಲಿನ ಆಟೋನಗರದ ಕ್ರಾಂತಿ ಚಕ್ರ ಬಳದ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಕ್ರಾಂತಿ ಚಕ್ರ ಬಳಗದ ಅಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡಿದ ಮಹರ್ ಸಮಾಜದ ಸತ್ಯಕತೆಯಾಗಿದ್ದು, ಕಾಲ್ಪನಿಕ ಕತೆಯಲ್ಲ. ಮಹರ್ ಸಮುದಾಯ ಭೀಮಾ ತೀರದಲ್ಲಿ ಹೋರಾಟ ಮಾಡಿದ್ದರಿಂದ ಭೀಮಾ ಕೋರೆಗಾಂವ್ ಎಂದು ಹೆಸರುವಾಸಿಯಾಗಿದೆ. 500 ಮಹರ್ ಸೈನಿಕರು ಸೇರಿಕೊಂಡು 28000 ಸಾವಿರ ಪೇಶ್ವೆಗಳ ಸೈನವನ್ನು ಸದೆಬಡಿದಿರುವುದು ಇತಿಹಾಸ. ಆ ಸ್ಥಳದಲ್ಲಿ ಅಂಬೇಡ್ಕರ್ ಅವರು ವಿಜಯಸ್ತಂಭ ನಿರ್ಮಾಣ ಮೂಲಕ ವಿಜಯೋತ್ಸವ ಆಚರಿಸಿದರು ಎಂದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಪರಶುರಾಮ್, ಕೇಶವನಾಯ್ಕ, ಚಾಂದ್‌ಪಾಷಾ, ಹನುಮಂತಪ್ಪ ಚೌಡಪ್ಪ, ಮಹೆಬೂಬ್‌ಸಾಬ್ ಲಾಠಿ, ಯೂಸೂಫ್, ನಿರುಪಾದಿ ಭೋವಿ, ಅಯ್ಯಪ್ಪ ಸಂಕನಾಳ, ಜಗದೀಶ, ಅಲ್ಲಾಭಕ್ಷಿ, ರಸೂಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net