ಶೈಕ್ಷಣಿಕ ಕ್ರಾಂತಿ ಹರಿಕಾರರು ಮರಿಶಾಂತವೀರ ಶಿವಯೋಗಿಗಳು

ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ 16ನೇ ಪೀಠಾಧಿಪತಿ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ 59ನೇ ಪುಣ್ಯಸ್ಮರಣೆ ಹಾಗೂ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್​ ಸಂಸ್ಥಾಪನಾ ದಿನಾಚರಣೆ ಮಾಡಲಾಯಿತು. ಪ್ರಾಚಾರ್ಯ ಡಾ. ಚನ್ನಬಸವ, ಪ್ರಾಧ್ಯಾಪಕರಾದ ಡಾ. ನಾಗರಾಜ ದಂಡೋತಿ, ಡಾ. ದಯಾನಂದ ಸಾಳುಂಕೆ, ಪ್ರೊ. ಶರಣಬಸಪ್ಪ ಬಿಳಿಯಲೇ, ಮಹೇಶ ಬಿರಾದಾರ, ಡಾ. ಸುಂದರ ಮೇಟಿ, ಡಾ. ಶರಣಪ್ಪ ಜಾಲಿಹಾಳ, ಡಾ. ಅರುಣಕುಮಾರ ಎ.ಜಿ. ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ. ನಾಗರಾಜ ದಂಡೋತಿ ಅಭಿಪ್ರಾಯ
ಕೊಪ್ಪಳ : ಗವಿಮಠದ 16ನೇ ಪೀಠಾಧಿಪತಿ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ಮಹಾನ್​ ಸಂತರು ಎಂದು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 16ನೇ ಪೀಠಾಧಿಪತಿ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳ 59ನೇ ಪುಣ್ಯಸ್ಮರಣೆ ಹಾಗೂ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್​ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗವಿಮಠವು 18 ಪೀಠಾಧಿಪತಿಗಳ ಸುದೀರ್ಘ ಪರಂಪರೆಯನ್ನು ಹೊಂದಿದ್ದು, ಪ್ರಸ್ತುತ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪೀಠವನ್ನು ಮುನ್ನಡೆಸುತ್ತಿದ್ದಾರೆ. ರೋಣ ತಾಲೂಕಿನ ಸೂಡಿ ಗ್ರಾಮದಲ್ಲಿ ಜನಿಸಿದ ಮರಿಶಾಂತವೀರ ಮಹಾಶಿವಯೋಗಿಗಳ ಮೂಲನಾಮ ಗುರುನಂಜಯ್ಯ. ಸೂಡಿ, ಬಟಗೇರಿ, ಸೊಲ್ಲಾಪುರ ಹಾಗೂ ಕಾಶಿಯಲ್ಲಿ ಶಿಕ್ಷಣ ಪಡೆದ ಅವರು, ಶಿಕ್ಷಣವೇ ಸಮಾಜದ ಪ್ರಗತಿಗೆ ಮೂಲ ಎಂಬ ನಂಬಿಕೆಯಿಂದ 1951ರಲ್ಲಿ ಕೊಪ್ಪಳದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ನಂತರ 1963ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್​ ಸ್ಥಾಪಿಸುವ ಮೂಲಕ ಈ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದರು ಎಂದು ತಿಳಿಸಿದರು.
ಸುಮಾರು ಐದು ದಶಕಗಳ ಕಾಲ ಆಧ್ಯಾತ್ಮಿಕ ಸೇವೆಯ ಜತೆಗೆ ಅಕ್ಷರ ದಾಸೋಹ ನಡೆಸಿ, ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 1967ರ ಜುಲೈ 1ರಂದು ಲಿಂಗೈಕ್ಯರಾದ ಅವರ ಸ್ಮರಣಾರ್ಥದ ದಿನವನ್ನು ಟ್ರಸ್ಟ್​ನ ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಪ್ರಾಚಾರ್ಯ ಡಾ. ಚನ್ನಬಸವ, ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಪ್ರೊ. ಶರಣಬಸಪ್ಪ ಬಿಳಿಯಲೇ, ಮಹೇಶ ಬಿರಾದಾರ, ಡಾ. ಸುಂದರ ಮೇಟಿ, ಡಾ. ಶರಣಪ್ಪ ಜಾಲಿಹಾಳ, ಡಾ. ಅರುಣಕುಮಾರ ಎ.ಜಿ., ಡಾ. ಮಂಜುನಾಥ ಎಂ., ಡಾ. ಮಂಜುನಾಥ ಗಾಳಿ, ಡಾ. ರಾಜು ಹೊಸಮನಿ, ಪ್ರವಿಣ ಹಾದಿಮನಿ, ವಿನೋದ ಮುದಿಬಸನಗೌಡರ್​, ಡಾ. ಪ್ರಶಾಂತ್​ ಕೊಂಕಲ್​, ಬಸವರಾಜ ಗುಡ್ಲಾನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net