ಶ್ರೀ ಕನಕಾಚಲಪತಿ ರಥದ ಮನೆಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ಚಂದ್ರೇಗೌಡ, ಕೀರ್ತಿಕುಮಾರ ಸೋನಿ, ದುರ್ಗಾದಾಸ್ ಯಾದವ್ ಇತರರಿದ್ದರು.
ಕನಕಗಿರಿ: ಮುಂಚೆ ಇದ್ದ ಸ್ಥಳದಿಂದ ಸ್ಥಳಾಂತರಿಸಲಾದ ಕನಕಾಚಲಪತಿ ರಥದ ಮನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕನಕಾಚಲಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
17.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ಕನಕಾಚಲಪತಿ ರಥದ ಮನೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ದೇವಸ್ಥಾನ ನಿಧಿಯಿಂದ ರಥದ ಸುರಕ್ಷತಾ ಶೆಡ್ ನಿರ್ಮಿಸಲಾಗಿದ್ದು, ದೇವಸ್ಥಾನದ ವ್ಯಾಪ್ತಿಗೆ ಪಡೆಯಲಾಗಿದೆ.
ಸಣ್ಣಪುಟ್ಟ ಕಾಮಗಾರಿಗಳ ನಿರ್ವಹಣೆಗಾಗಿ ಸರ್ಕಾರಕ್ಕೆ ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ರಥಸಪ್ತಮಿ ಸಮೀಪಿಸುತ್ತಿದ್ದು, ಕನಕಾಚಲಪತಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರೋತ್ಸವಕ್ಕೆ ಸಿದ್ಧತೆ ಆರಂಭವಾಗಲಿದೆ. ಅಷ್ಟರಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ದುರ್ಗಾದಾಸ ಯಾದವ್, ಚಂದ್ರೇಗೌಡ, ಕೀರ್ತಿಕುಮಾರ ಸೋನಿ, ಹನುಮಂತರೆಡ್ಡಿ ಮಹಲಿನಮನಿ, ರಾಘವೇಂದ್ರ ಕಮ್ಮಾರ ಇತರರಿದ್ದರು.