ಒತ್ತಡದ ಬದುಕಿನಲ್ಲಿ ನೆಮ್ಮದಿಯ ಹಾದಿ

ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಬಿಇಒ ಅಶೋಕ ಗೌಡ ಉದ್ಘಾಟಿಸಿದರು. ಬೇನಾಳದ ಸದಾಶಿವ ಸ್ವಾಮೀಜಿ, ಜಿಗೇರಿಯ ಕರಿಸಿದ್ದೇಶ್ವರ ಸ್ವಾಮೀಜಿ, ಪಪಂ ಮುಖ್ಯಾಧಿಕಾರಿ ನಾಗೇಶ, ಆಯುಷ್ ವೈದ್ಯ ವಿವೇಕ ವಾಗುಲೆ, ಸುರೇಶಗೌಡ ಶಿವನಗೌಡ್ರ, ಅಮರೇಶ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಅಶೋಕ ಗೌಡ ಹೇಳಿಕೆ
  • ಅಂತಾರಾಷ್ಟ್ರೀಯ ಯೋಗ ದಿನ
ಯಲಬುರ್ಗಾ: ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಿ ಎಂದು ಬಿಇಒ ಅಶೋಕ ಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತ ಹಾಗೂ ಶ್ರೀ ಬಸವಲಿಂಗೇಶ್ವರ ಯೋಗ ತರಬೇತಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಯೋಗದಿಂದ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಸದೃಢತೆ ಪಡೆಯಲು ಸಾಧ್ಯ ಎಂದರು. ತಾಲೂಕು ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಪ್ರಧಾನಿ ಮೋದಿ ಅವರ ಪ್ರಯತ್ನದಿಂದ ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಶ್ರೀಧರ ಮುರುಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಬೇನಾಳದ ಸದಾಶಿವ ಸ್ವಾಮೀಜಿ, ಜಿಗೇರಿಯ ಕರಿಸಿದ್ದೇಶ್ವರ ಸ್ವಾಮೀಜಿ, ಪಪಂ ಮುಖ್ಯಾಧಿಕಾರಿ ನಾಗೇಶ, ಆಯುಷ್ ವೈದ್ಯ ವಿವೇಕ ವಾಗುಲೆ, ಪ್ರಮುಖರಾದ ಸುರೇಶಗೌಡ ಶಿವನಗೌಡ್ರ, ಅಮರೇಶ ಹುಬ್ಬಳ್ಳಿ, ಬಸವರಾಜ ಗುಳಗುಳಿ, ಸಂತೋಷಿಮಾ ಜೋಶಿ, ದೊಡ್ಡಯ್ಯ ಗುರುವಿನ, ಉಮೇಶ ಕುಂಬಾರ, ಖಾದರಸಾಬ್, ಸಂಗಮೇಶ ಶ್ಯಾಗೋಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net