ಮೌನೇಶ್ವರ ಪಲ್ಲಕ್ಕಿ ಉತ್ಸವ ಅದ್ದೂರಿ

ಹನುಮಸಾಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಮೌನೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಹನುಮಸಾಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಮೌನೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
Published on
ಹನುಮಸಾಗರ: ಪಟ್ಟಣದ ಮೌನೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದೇವತೆ ದ್ಯಾಮಾಂಬಿಕಾ ದೇವಿ ದೇವಸ್ಥಾನದಿಂದ ಆರಂಭವಾದ ಮೌನೇಶ್ವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ, ಬನಶಂಕರಿ ದೇವಸ್ಥಾನ, ಹಳೇ ಬಜಾರ, ಬಸವೇಶ್ವರ ದೇವಸ್ಥಾನ, ಕರಿಸಿದ್ದೇಶ್ವರ ಮಠ, ರಾಘವೇಂದ್ರಸ್ವಾಮಿ ಮಠದ ಮಾರ್ಗವಾಗಿ ಮೌನೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಕರಡಿ ಮಜಲು, ಪುರವಂತಿಕೆ ಹಾಗೂ ಕಾಳಿಕಾ ದೇವಿ ಮಹಿಳಾ ಭಜನಾ ಮಂಡಳಿಯವರು ಪಾಲ್ಗೊಂಡಿದ್ದರು. ಪಲ್ಲಕ್ಕಿ ಉತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಿಶ್ವಕರ್ಮ ಸಮುದಾಯದ ಸ್ಥಳೀಯ ಗೌರವಾಧ್ಯಕ್ಷ ವೀರಪ್ಪ ಪತ್ತಾರ, ಅಧ್ಯಕ್ಷ ಮೌನೇಶ ಸೋನಾರ, ಉಪಾಧ್ಯಕ್ಷ ಭೀಮಣ್ಣ ಕಮ್ಮಾರ, ಮುಖಂಡರಾದ ಮಹಾಂತೇಶ ಅಗಿಮುಂದಿ, ಬಸವರಾಜ ಹಳ್ಳೂರ, ಬಸವರಾಜ ಬಾಚಲಾಪೂರ, ರುದ್ರಪ್ಪ ಬಡಿಗೇರ, ಮಹಾಂತೇಶ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಹನುಮಂತ ಬಡಿಗೇರ, ಭರಮಪ್ಪ ಬಿಂಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net