ಇಲ್ಲಿನ ಬಸವಣ್ಣ ವೃತ್ತದ ಬಳಿಯ ಗೂಳಿಬಸವೇಶ್ವರ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಶೈಲ ಪೀಠದಲ್ಲಿ ಮಾಲಾಧಾರಿಗಳು ಹಾಗೂ ಗ್ರಾಮದ ಹಿರೇಮಠದ ಉಮೇಶ ತಾತ, ವಿನಯಕುಮಾರ ಸ್ವಾಮಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಿಕಾರ್ಜುನಗೆ ವಿಶೇಷ ಪೂಜೆ, ಅಭಿಷೇಕ, ಪುಷ್ಪಾಲಂಕಾರ ಇತರ ಧಾರ್ಮಿಕ ಕಾರ್ಯಗಳು ನೆರವೇರಿದವು. ಶಿವ ಮಾಲಾಧಾರಿ ಹಾಗೂ ಗುರುಶಿವ ಬಸವರಾಜ ಗುಂಡದ್, ಕನ್ಯಾಮಾಲಾಧಾರಿಗಳಿಗೆ ಇರುಮುಡಿ ಕಟ್ಟಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವ ಮಾಲಾಧಿಕಾರಿಗಳು ಮೆರವಣಿಗೆ ನಡೆದರು. ಮಾಲಾಧಿಕಾರಿಗಳ ಕುಟುಂಬಸ್ಥರು ಪಾಲ್ಗೊಂಡಿದ್ದರು.