ಹಿಂದೂ ಸಮಾಜ್ಯೋತ್ಸವ ಶೋಭಾಯಾತ್ರೆ ಅದ್ದೂರಿ

ಯಲಬುರ್ಗಾದಲ್ಲಿ ಹಿಂದೂ ಸಮಾಜ್ಯೋತ್ಸವ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವ ಹಾಲಪ್ಪ ಆಚಾರ್, ಪ್ರಮುಖರಾದ ಬಸವಲಿಂಗಪ್ಪ ಭೂತೆ, ವೀರಣ್ಣ  ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಬಸವನಗೌಡ ತೊಂಡಿಹಾಳ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶೋಭಾಯಾತ್ರೆ
  • ಬಸವಲಿಂಗೇಶ್ವರ ಸ್ವಾಮೀಜಿ

ಹಿಂದೂ ಸಮಾಜ್ಯೋತ್ಸವ ಶೋಭಾಯಾತ್ರೆ ಅದ್ದೂರಿ

ಯಲಬುರ್ಗಾ: ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶುಕ್ರವಾರ ಹಿಂದೂ ಸಮಾಜ್ಯೋತ್ಸವ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಗೋಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಂತರ ವಿವಿಧ ವಾಧ್ಯಮೇಳ, ಭಜನೆ, ಶಾಲಾ ವಿದ್ಯಾರ್ಥಿಗಳ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಶೋಭಾಯಾತ್ರೆಯಲ್ಲಿ ಗಮನ ಸೆಳೆಯಿತು. ದಾರಿಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿ ಹೂಗಳಿಂದ ಶೃಂಗರಿಸಿ ಶೋಭಾಯಾತ್ರೆಯನ್ನು ಸ್ವಾಗತಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ್, ಪ್ರಮುಖರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಬಸವನಗೌಡ ತೊಂಡಿಹಾಳ, ಪ್ರಕಾಶ ಬೇಲೆರಿ, ವಿಶ್ವನಾಥ ಮರಿಬಸಪ್ಪನವರ, ಶರಣಪ್ಪ ಇಳಿಗೇರ, ಆನಂದ ಉಳ್ಳಾಗಡ್ಡಿ, ಕಳಕನಗೌಡ ಪಾಟೀಲ್, ದಾನನಗೌಡ ತೊಂಡಿಹಾಳ್, ಸುರೇಶಗೌಡ ಶಿವನಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net