ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಭಕ್ತರು 15 ಸಾವಿರ ರೊಟ್ಟಿ, 7 ಪ್ಯಾಕೇಟ್ ಅಕ್ಕಿಮ 58 ಚೀಲ ಮೆಕ್ಕೆಜೋಳ, 2 ಚೀಲ ಭತ್ತ ಹಾಗೂ 10 ಕ್ವಿಂಟಾಲ್ ಹುಣಸೆ ಚಟ್ನಿ ಸಲ್ಲಿಸಿದರು. ಕಲಬುರ್ಗಿ ಜಿಲ್ಲೆಯ ಹಾಗರಗುಂಡಿಗಿ ಗ್ರಾಮದ ಭಕ್ತರು 40 ಕ್ವಿಂಟಾಲ್ ತೊಗರಿ ಬೇಳೆ ಅರ್ಪಿಸಿದರು. ಕಳೆದ ವರ್ಷ 40 ಕ್ವಿಂಟಾಲ್ ಶೇಂಗಾ ಚಟ್ನಿ ಸಲ್ಲಿಸಿದ್ದರು. ದೇಣಿಗೆ ಅರ್ಪಿಸಿದ ಭಕ್ತರಿಗೆ ಶ್ರೀಗಳು ಆಶೀರ್ವದಿಸಿದರು.