ಯಲಬುರ್ಗಾ ಜೆಸ್ಕಾಂ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನೌಕರರ ಸಂಘ ಗುರುವಾರ ಸಾಂಕೇತಿಕ ಮುಷ್ಕರ ನಡೆಯಿತು. ಪ್ರಮುಖರಾದ ಮಹ್ಮದ್ ಖಲೀಮುದ್ದೀನ್, ಶಿವಕುಮಾರ, ರವಿ ಟೆಂಗಿನಕಾಯಿ, ಅಮರೇಶರಡ್ಡಿ, ಮಹೇಶ ಹುಬ್ಬಳ್ಳಿ, ಸುರೇಶ, ವೀರೇಶ, ಸಿದ್ದಲಿಂಗೇಶ್ವರ, ಮಂಜು ಗಿರಡ್ಡಿ ಇತರರಿದ್ದರು.
ಯಲಬುರ್ಗಾ: ವಿದ್ಯುತ್ ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನೌಕರರ ಸಂಘ ಗುರುವಾರ ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಸಾಂಕೇತಿಕ ಮುಷ್ಕರ ನಡೆಸಿತು. ಕೇಂದ್ರ ವಿದ್ಯುತ್ ಇಲಾಖೆ ಖಾಸಗೀಕರಣವನ್ನು ನಿಲ್ಲಿಸಬೇಕು. ಇಂಧನ ಇಲಾಖೆ ಸಾರ್ವಜನಿಕರ ಆಸ್ತಿಯಾಗಿದೆ. ವಿದ್ಯುತ್ ಕಾಯ್ದೆ ಬಿಲ್ ಪಾಸ್ ಮಾಡಲು ಮುಂದಾಗಿರುವುದು ಸರಿಯಲ್ಲ. ರೈತರಿಗೆ ಅನ್ಯಾಯ ಮಾಡಿ ಅಧಿವೇಶನದಲ್ಲಿ ವಿದ್ಯುತ್ ಕಾಯ್ದೆ ಬಿಲ್ ತಿದ್ದುಪಡಿ ಮಾಡಲು ಹೊರಟಿದೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ತಾಲೂಕಾಧ್ಯಕ್ಷ ಆದೇಶ ಹುಬ್ಬಳ್ಳಿ ಆಕ್ರೋಶ ವ್ಯಕ್ತಪಡಿಸಿದರು.