ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ಗ್ರಾಮದಲ್ಲಿ ಸುಮಾರು 10 ಮಂಗಗಳಿದ್ದು, ದಿನದಿಂದ ದಿನಕ್ಕೆ ಇವುಗಳ ಉಪಟಳ ಹೆಚ್ಚಾಗಿದೆ. ಮನೆಯವರು ಪದಾರ್ಥಗಳನ್ನು ಒಣಗಿಸಲೆಂದು ಹೊರಗಡೆ ಇಡುವುದು ಕಷ್ಟವಾಗಿದೆ.
ಇನ್ನು ಕಿರಾಣಿ ಅಂಗಡಿಗಳಲ್ಲಿನ ತಿನುಸುಗಳನ್ನು ಎತ್ತಿಕೊಂಡು ಹೋಗುತ್ತಿವೆ. ಅಲ್ಲದೇ, ಗ್ರಾಮಕ್ಕೆ ಹೊಂದಿಕೊಂಡ ತೋಟಗಳಿಗೆ ನುಗ್ಗಿ ಮೆಕ್ಕೆಜೋಳ, ಹುಳಿಕಡ್ಲೆ ತಿನ್ನುತ್ತಿದ್ದು, ರೈತರು ಇವುಗಳನ್ನು ಹೊಲದಿಂದ ಓಡಿಸಲು ದಿನನಿತ್ಯ ಹರಸಾಹಸ ಪಡುತ್ತಿದ್ದಾರೆ.
ಮಮ್ಮೊಗಳೊಂದಿಗೆ ಸಿಮೆಂಟ್ ಸೀಟ್‌ನ ಮನೆಯಲ್ಲಿ ವಾಸವಾಗಿರುವ ವೃದ್ಧೆ ಬಾಳಮ್ಮ ಕುರುಬರ್ ಅವರ ಮನೆಯ ಮೇಲೆ ಕೋತಿಗಳು ಜಿಗಿದಾಡಿದ್ದು ಮನೆಯ ಮುಂದೆ ನೆರಳಿಗಾಗಿ ಹಾಕಲಾಗಿದ್ದ ಸಿಮೆಂಟ್ ಸೀಟ್‌ಗಳೆಲ್ಲ ಒಡೆದು ಚೆಲ್ಲಾಪಿಲ್ಲಿಯಾಗಿವೆ.