ಪಿಡಿಒ ವೀರನಗೌಡ ಚೆನ್ನವೀರನಗೌಡ ಮಾತನಾಡಿ, ಗ್ರಾಪಂನ ನೋಟಿಸ್ ಬೋರ್ಡ್‌ಗೆ ಮತದಾರರ ಕರಡು ಪ್ರತಿ ಲಗತ್ತಿಸಲಾಗಿದ್ದು, ಸೆ.10ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಕರಡು ಪಟ್ಟಿಯಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ತಿಳಿಸಬೇಕು. ಮತದಾರರು ಕರಡು ಪಟ್ಟಿಯಲ್ಲಿಹೆಸರು, ವಿಳಾಸ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.